ಬಹಿರಂಗವಾಗಲಿದೆ ಮಾಜಿ ಸಚಿವರ 'ನಗ್ನ'ಸತ್ಯದ ಸಿಡಿ

ಭೋಪಾಲ್: ಸಲಿಂಗಕಾಮದ ಆರೋಪ ಹೊತ್ತು ರಾಜಿನಾಮೆ ನೀಡಿರುವ ಮಧ್ಯಪ್ರದೇಶದ ವಿತ್ತ ಸಚಿವ ರಾಘವ್ಜಿ ಅವರ ವಿಕೃತಕಾಮದ ಸಾಕ್ಷ್ಯಗಳಾಗಿರುವ ಸಿಡಿಗಳು ತನ್ನ ಕೈಯಲ್ಲಿದೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ನಾಯಕ ಶಿವಶಂಕರ್ ಪಟೇರಿಯಾ ಎಂಬವರು ರಾಘವ್ಜಿ ಅವರು ವಿಕೃತ ಸಂಭೋಗ ನಡೆಸಿರುವುದಕ್ಕೆ ಸಾಕ್ಷ್ಯಗಳಾಗಿರುವ 22 ಸಿಡಿ ತನ್ನ ಬಳಿಯಲ್ಲಿದೆ ಎಂದು ಹೇಳಿದ್ದಾರೆ.
ರಾಘವ್ಜಿ ತನ್ನ ಮೇಲೆ ಹಲವಾರು ವರ್ಷಗಳಿಂದ ವಿಕೃತ ಸಂಭೋಗ ನಡೆಸುತ್ತಿದ್ದರು ಎಂದು ಅವರ ಕೆಲಸಗಾರ ರಾಜ್ಕುಮಾರ್ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದನು. ಅದೇ ವೇಳೆ ರಾಘವ್ಜಿ ತನ್ನ ಜತೆ ಲೈಂಗಿಕ ಸಂಪರ್ಕ ನಡೆಸಿದನ್ನು ರೆಕಾರ್ಡ್ ಮಾಡಿ ಸಿಡಿಯಲ್ಲಿ ಸೇವ್ ಮಾಡುತ್ತಿದ್ದರು ಎಂದು ರಾಜ್ ಕುಮಾರ್ ದೂರಿದ್ದನು.
ಈ ದೂರಿಗೆ ಪುಷ್ಠಿ ನೀಡಿವಂತೆ ರಾಘವ್ಜಿ ವಿಕೃತ ಸಂಭೋಗ ನಡೆಸಿರುವ ಸಿಡಿ ಇಂಟರ್ನೆಟ್ನಲ್ಲಿ ಹರಿದಾಡಿತ್ತು.
ಈ ಹಿನ್ನೆಲೆಯಲ್ಲಿ ರಾಘವ್ಜಿ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜಿನಾಮೆ ಸಲ್ಲಿಸಿದ್ದರು.
ಇದೀಗ ಬಿಜೆಪಿ ನಾಯಕರೊಬ್ಬರು ರಾಘವ್ಜಿಯ 22 ಸೆಕ್ಸ್ ಸಿಡಿಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೆ ನೀಡಿರುವುದರಿಂದ ರಾಘವ್ಜಿಯ ಜೀವನದ ಹಲವಾರು ನಗ್ನ ಸತ್ಯಗಳು ಹೊರಬರಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


