ರೈನಾ, ಜಡೇಜಾ ನಡುವೆ ವಾಗ್ವಾದ
ನವದೆಹಲಿ: ಶುಕ್ರವಾರ ಪೋರ್ಟ್ ಆಫ್ ಸ್ಪೇನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಕ್ರಿಕೆಟ್ ಪಂದ್ಯದಲ್ಲಿ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ನಡುವೆ ಮಾತಿನ ಚಕಮಕಿ ನಡೆದಿದೆ.
26 ಮತ್ತು 32ನೇ ಓವರ್ನಲ್ಲಿ ಜಡೇಜಾ ಎಸೆದ ಬಾಲ್ನ್ನು ಎರಡು ಬಾರಿ ಕ್ಯಾಚ್ ಕೈ ಚೆಲ್ಲಿದ್ದಕ್ಕಾಗಿ ರೈನಾ ವಿರುದ್ಧ ಜಡೇಜಾ ಸಿಟ್ಟಾಗಿದ್ದಾರೆ.
26ನೇ ಓವರ್ನಲ್ಲಿ ಕೇಮರ್ ರೋಚ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕ್ಯಾಚ್ ಬಿಟ್ಟ ಕಾರಣ ಅಲ್ಲಿ ವಿಕೆಟ್ ಉರುಳುವ ಸಾಧ್ಯತೆ ಮಿಸ್ ಆಗಿಬಿಟ್ಟಿತ್ತು.
ನಂತರ 32ನೇ ಓವರ್ನಲ್ಲಿ ಸುನಿಲ್ ನರೈನ್ ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ಭುವನೇಶ್ವರ್ ಮತ್ತು ರೈನಾ ಇಬ್ಬರೂ ಗೊಂದಲಕ್ಕೀಡಾಗಿ ಕ್ಯಾಚ್ ಕೈ ಚೆಲ್ಲಿದ್ದರು.
ಇದಾದ ನಂತರ ಸಿಟ್ಟಿಗೆದ್ದ ಜಡೇಜಾ ರೈನಾ ಜತೆ ವಾಗ್ವಾದಕ್ಕಿಳಿದಿದ್ದಾರೆ. ಇಬ್ಬರ ನಡುವಿನ ಮಾತಿನ ಚಕಮಕಿ ನಾಯಕ ವಿರಾಟ್ ಕೊಹ್ಲಿಯ ಮಧ್ಯಸ್ಥಿಕೆಯಲ್ಲಿ ಅಂತ್ಯ ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

