ಈಗಿನ ಸುದ್ದಿ

ಸೋಲಾರ್ ಪ್ರಕರಣ: ಚಾಂಡಿ ರಾಜಿನಾಮೆಗೆ ಹೆಚ್ಚಿದ ಒತ್ತಡ

Published On :

ತಿರುವನಂತಪುರಂ: ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ, ವಿಧಾನಸಭೆಯ ಕಲಾಪವನ್ನು ಬಹಿಷ್ಕರಿಸಿದ ಸಿಪಿಐ(ಎಂ) ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ರಾಜಿನಾಮೆಗೆ ಮಂಗಳವಾರ ಆಗ್ರಹಿಸಿದೆ.

ಇಂದು ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷಗಳು ಚಾಂಡಿ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಚಾಂಡಿ ಅವರು ಪ್ರಕರಣದ ನೈತಿಕ ಹೊಣೆಹೊತ್ತು ಈ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿಪಿಐಎಂ ನಾಯಕ ಸಿ. ದಿವಾಕರನ್ ಅವರು ಆಗ್ರಹಿಸಿದರು.

ಪ್ರಕರಣದ ಸಹ ಆರೋಪಿಯಾಗಿರುವ ಸರಿತಾ ನಾಯರ್ ಜೊತೆಗೂಡಿ ಸುರೇಂದ್ರನ್ ನಾಯರ್ ಅವರು ಸೋಲಾರ್ ಪ್ರಕರಣ ಸಂಬಂಧ ಚಾಂಡಿ ಅವರೊಂದಿಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ ಎಂದು ದಿವಾಕರನ್ ವಾದಿಸಿದರು.

ಸುರೇಂದ್ರನ್ ನೀಡಿರುವ ಹೇಳಿಕೆಯನ್ನು ತಳ್ಳಿಹಾಕಿದ ಚಾಂಡಿ, ಇದೊಂದು ಶುದ್ಧ ಸುಳ್ಳು, ಕಳೆದ ವರ್ಷ ಜುಲೈನಲ್ಲಿ ನನ್ನನ್ನು ಸುರೇಂದ್ರ ಅವರು ಸಂದಿಸಿದ್ದು ನಿಜ. ಆದರೆ ಸೋಲಾರ್ ಪ್ರಾಜೆಕ್ಟ್ ಸಂಬಂಧ ಅಲ್ಲ, ಸುರೇಂದ್ರನ್ ಅವರು ನಿನ್ನೆ ಹೊಸದಾಗಿ ಪ್ರಾರಂಭಿಸಿರುವ ಟಿವಿ ಛಾನೆಲ್ ಸಂಬಂಧ ಚರ್ಚಿಸಲು ಬಂದಿದ್ದರು ಎಂದು ಚಾಂಡಿ ಹೇಳಿದ್ದಾರೆ. ಅಲ್ಲದೆ ಸರಿತಾ ನಾಯರ್ ಅವರನ್ನು ನಾನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಲಾರ್ ಹಗರಣ ಸಂಬಂಧ ನನ್ನನ್ನು ಬಲಿಪಶು ಮಾಡಲು ವಿರೋಧ ಪಕ್ಷಗಳು ನಡೆಸುತ್ತಿರುವ ರಾಜಕೀಯ ಪಿತ್ತೂರಿ ಇದಾಗಿದೆ ಚಾಂಡಿ ಸಮರ್ಥಿಸಿಕೊಂಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.