ದೆಹಲಿ ಗ್ಯಾಂಗ್ ರೇಪ್: ತೀರ್ಪು 25ಕ್ಕೆ ಮುಂದೂಡಿಕೆ

ನವದೆಹಲಿ: ಇಂದು ಪ್ರಕಟಗೊಳ್ಳಬೇಕಿದ್ದ ದೆಹಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಮೊದಲ ತೀರ್ಪು ಜುಲೈ 25ಕ್ಕೆ ಮುಂದೂಡಲಾಗಿದೆ.
ಪ್ರಕರಣದ ಬಾಲಪರಾಧಿ ವಿರುದ್ಧದ ವಿಚಾರಣೆಯನ್ನು ಜುಲೈ 5ರಂದು ಅಂತ್ಯಗೊಳಿಸಿದ್ದ ಬಾಲಪರಾಧ ನ್ಯಾಯ ಮಂಡಳಿಯ ಮ್ಯಾಜಿಸ್ಟ್ರೇಟ್ ಗೀತಾಂಜಲಿ ಗೋಯಲ್ ಅವರು, ತೀರ್ಪು ಇಂದಿಗೆ ಕಾಯ್ದಿರಿಸಿದ್ದರು. ಆದರೆ ಇಂದು ಸಹ ತೀರ್ಪು ಪ್ರಕಟಿಸಿದ ನ್ಯಾ.ಗೋಯಲ್ ಅವರು, ತೀರ್ಪನ್ನು 25ಕ್ಕೆ ಕಾಯ್ದಿರಿಸಿದ್ದಾರೆ.
23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರು ಆರೋಪಿಗಳಲ್ಲಿ 17 ವರ್ಷದವನು ಒಬ್ಬನಾಗಿದ್ದನು. ಕಾನೂನಿನ ಪ್ರಕಾರ 18 ವರ್ಷಗಳ ಕೆಳಪಟ್ಟವರು ತಪ್ಪು ಮಾಡಿದರೆ ಬಾಲಪರಾಧಿ ಎಂದು ಪರಿಗಣಿಸಲಾಗುತ್ತದೆ. ಇವರ ವಿಚಾರಣೆಯನ್ನು ಬಾಲಪರಾಧ ಮಂಡಳಿಯಲ್ಲಿ ನಡೆಸಲಾಗುತ್ತದೆ.
ಕಳೆದ ತಿಂಗಳಷ್ಟೇ ಈ ಬಾಲಪರಾಧಿಗೆ 18 ವರ್ಷ ತುಂಬಿದ್ದು, ಮಂಡಳಿ ಕ್ರಮವೇನು ಎಂಬುದು ಕಾದು ನೋಡಬೇಕಿದೆ.
ಕಳೆದ ವರ್ಷ ಡಿಸೆಂಬರ್ 16ರಂದು ಆರು ಜನ ದುಷ್ಕರ್ಮಿಗಳು ಚಲಿಸುತ್ತಿದ್ದ ಬಸ್ನಲ್ಲಿ 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಸಿಂಗಾಪುರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


