ಬೋಧಗಯಾ ಸ್ಫೋಟ; ಇಬ್ಬರು ಆರೋಪಿಗಳ ಬಿಡುಗಡೆ
ಬೋಧಗಯಾ: ಬೋಧಗಯಾ ಸರಣಿ ಸ್ಫೋಟ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುವ ಸಲುವಾಗಿ ಇಬ್ಬರು ಸ್ಥಳೀಯ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಗುರುವಾರ ಬಿಡುಗಡೆಗೊಳಿಸಿದೆ.
ಸರಣಿ ಸ್ಫೋಟ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಬಿನೋದ್ ಮಿಸ್ತ್ರಿ ಹಾಗು ದಶರಥ್ ಯಾದವ್ ಅವರಿಂದ ಹೇಳಿಕೆ ಪಡೆದುಕೊಂಡು, ಕಳೆದ ರಾತ್ರಿ ಇಬ್ಬರನ್ನು ಬಿಡುಗಡೆ ಮಾಡಿರುವುದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಿಸ್ತ್ರಿ ಅವರ ಗುರುತಿನ ಚೀಟಿ ದೇವಸ್ಥಾನದ ಆವರಣದಲ್ಲಿ ಪತ್ತೆಯಾಗಿತ್ತು. ಈ ಗುರುತಿನ ಚೀಟಿ ಆಧಾರವಾಗಿಟ್ಟುಕೊಂಡು ಮಿಸ್ತ್ರಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೆ ಮಿಸ್ತ್ರಿ ಅವರ ಮೊಬೈಲ್ ಕರೆಗಳನ್ನು ಜಾಲಾಡಿದ ಅಧಿಕಾರಿಗಳಿಗೆ ಬಿನೋದ್ ಮಿಸ್ತ್ರಿಗೆ ದಶರಥ್ ಅವರಿಂದ ಹೆಚ್ಚಿನ ಕರೆಗಳು ಬಂದಿರುವುದು ತಿಳಿದುಬಂದಿದ್ದು, ಈ ಇಬ್ಬರನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ಸರಣಿ ಸ್ಫೋಟ ನಡೆದ ದಿನ ಬೋಧಗಯಾ ಪ್ರದೇಶಕ್ಕೆ ಬಂದಿರುವ ದೂರವಾಣಿಗಳ ಬಗ್ಗೆ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸ್ಫೋಟಕ್ಕೂ ಮುನ್ನು ದೇವಸ್ಥಾನದ ಪಕ್ಕದಲ್ಲಿದ್ದ ಹೊಟೇಲ್‌ವೊಂದರಲ್ಲಿ ರೂಂ ಪಡೆದಿದ್ದ ನಾಲ್ವರು ಯುವಕರನ್ನು ಪಾಟ್ನಾ ಪೊಲೀಸರು ನಿನ್ನೆ ಬಿಡುಗಡೆಗೊಳಿಸಿದ್ದರು. ಇದರೊಂದಿಗೆ ಪ್ರಕರಣದಲ್ಲಿ ಶಂಕಿತ ಉಗ್ರರುರೆಂದು ಬಂಧಿಸಿದ್ದ 6 ಮಂದಿಯನ್ನು ಬಿಡುಗೊಳಿಸಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

