ಈಗಿನ ಸುದ್ದಿ

ಮೆಟ್ರೋ ರೈಲಿನಲ್ಲಿ 'ಕಾಮಕೇಳಿ': ಮತ್ತೊಂದು ವಿಡಿಯೋ ಲೀಕ್

Published On :

ನವದೆಹಲಿ:  ಕೆಲವು ದಿನಗಳ ಹಿಂದೆಯಷ್ಟೇ ದೆಹಲಿಯ ಮೆಟ್ರೋ ರೈಲಿನ ಒಳಗೆ ಕಾಮಕೇಳಿ ನಡೆಸುತ್ತಿದ್ದ ವಿಡಿಯೋವೊಂದು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹರಿದಾಡಿದ ಬೆನ್ನಲ್ಲೇ ಇದೀಗ ಅಂಥದ್ದೇ ವಿಡಿಯೋವೊಂದು ಲೀಕ್ ಆಗಿರುವ ಬಗ್ಗೆ ಸುದ್ದಿಯಾಗಿದೆ.

ಮೆಟ್ರೋ ರೈಲಿನ ಮೆಟ್ಟಿಲು ಮೇಲೆ ಜೋಡಿಯೊಂದು ಕಾಮಕೇಳಿಯಲ್ಲಿ ತೊಡಗಿರುವ ವಿಡಿಯೋ ದೃಶ್ಯವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ದೃಶ್ಯದ ತುಣುಕನ್ನು ಡಿಎಂಆರ್‌ಸಿ (ದೆಹಲಿ ಮೆಟ್ರೋ ರೈಲ್ ಕಾರ್ಪ್) ಹೆಚ್ಚಿನ ತನಿಖೆಗಾಗಿ ಚೀಫ್ ಸೆಕ್ಯೂರಿಟಿ ಕಮಿಷನರ್‌ಗೆ ಹಸ್ತಾಂತರಿಸಿದೆ. ಈ ಹಿಂದೆ ಲಭಿಸಿದ್ದ ವಿಡಿಯೋವನ್ನು ಕೂಡಾ ದೆಹಲಿ ಪೊಲೀಸರ ಸೈಬರ್ ಅಪರಾಧ ದಳದ ಪೊಲೀಸರು ತನಿಖೆಗೊಳಪಡಿಸಿದ್ದಾರೆ ಎಂದು ದೆಹಲಿ ಮೆಟ್ರೋದ ಎಕ್ಸಿಕ್ಯೂಟಿವ್ ಡೈರೆಕ್ಟರ್ (ಕಾರ್ಪರೇಟ್ ಕಮ್ಯೂನಿಕೇಷನ್ಸ್)  ಅನುಜ್ ದಯಾಳ್ ಹೇಳಿದ್ದಾರೆ.

ಅದೇ ವೇಳೆ ರೈಲಿನಲ್ಲಿ ಪ್ರಯಾಣಿಸುವ ಯಾತ್ರಿಕರು ಸಭ್ಯತೆಯಿಂದ ನಡೆದುಕೊಳ್ಳಬೇಕೆಂದು ಡಿಎಂಆರ್‌ಸಿ ಸಾರ್ವಜನಿಕರಿಗೆ ಮನವಿ ಮಾಡಿದೆ.

ಕೆಲವು ದಿನಗಳ ಹಿಂದೆಯಷ್ಟೇ ದೆಹಲಿ ಮೆಟ್ರೋ ರೈಲಿನ ಖಾಲಿ ಭೋಗಿಯೊಂದರಲ್ಲಿ ಪ್ರಣಯ ಜೋಡಿಯೊಂದು ಕಾಮಕೇಳಿಯಲ್ಲಿ ತೊಡಗಿರುವ ದೃಶ್ಯ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹರಿದಾಡಿತ್ತು.

ಇಂಥಾ ಕೃತ್ಯಗಳ ಬಗ್ಗೆ ಸೈಬರ್ ಸೆಲ್‌ಗೆ ದೂರು ನೀಡುವ ಮುನ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಬಹಿರಂಗ ಪಡಿಸಿದ್ದಕ್ಕಾಗಿ ಡಿಎಂಆರ್‌ಸಿ, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್‌ಎಫ್)ನ್ನು ತರಾಟೆಗೆ ತೆಗೆದುಕೊಂಡಿದೆ.

ಆದರೆ ತಮ್ಮ ಮೇಲಿನ ಆರೋಪವನ್ನು  ಸಿಐಎಸ್‌ಎಫ್ ತಳ್ಳಿ ಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.