ಈಗಿನ ಸುದ್ದಿ

ಯುಪಿಎ ಸರ್ಕಾರವನ್ನು ಟೀಕಿಸಿದ ರೆಸ್ಟೋರೆಂಟ್ ವಿರುದ್ಧ 'ಕೈ' ಕೆಂಗಣ್ಣು

ಯುಪಿಎ ಸರ್ಕಾರವನ್ನು ಟೀಕಿಸಿದ ರೆಸ್ಟೋರೆಂಟ್ ವಿರುದ್ಧ 'ಕೈ' ಕೆಂಗಣ್ಣು
Published On :

ಮುಂಬೈ: ಯುಪಿಎ ಸರ್ಕಾರವನ್ನು ಟೀಕಿಸಿದ ಕಾರಣಕ್ಕಾಗಿ ಮುಂಬೈಯಲ್ಲಿರುವ ರೆಸ್ಟೋರೆಂಟ್‌ವೊಂದು ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಮುಂಬೈಯಲ್ಲಿರುವ ಅದಿತಿ ಪ್ಯೂರ್ ವೆಜ್  ರೆಸ್ಟೋರೆಂಟ್‌ನ ಮಾಲೀಕ ಶ್ರೀನಿವಾಸ್ ಶೆಟ್ಟಿ ಎಂಬವರು ಎಸಿ ರೆಸ್ಟೋರೆಂಟ್‌ಗಳ ಮೇಲೆ ಹೊರಿಸಲಾಗಿರುವ ತೆರಿಗೆಯನ್ನು ಪ್ರತಿಭಟಿಸಿ, ತಮ್ಮ ರೆಸ್ಟೋರೆಂಟ್‌ನಲ್ಲಿ ಕೊಡುವ ಬಿಲ್‌ನಲ್ಲಿ ಯುಪಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿರುವ ಟಿಪ್ಪಣಿಯೊಂದನ್ನು ಮುದ್ರಿಸಿದ್ದರು.

"ಯುಪಿಎ ಸರ್ಕಾರದ ಪ್ರಕಾರ, ಹಣವನ್ನು (2ಜಿ, ಕಲ್ಲಿದ್ದಲು, ಕಾಮನ್‌ವೆಲ್ತ್ ಗೇಮ್ ಪ್ರಕರಣ) ತಿನ್ನುವುದು ಅನಿವಾರ್ಯ ಹಾಗು ಎಸಿ ರೆಸ್ಟೋರೆಂಟ್‌ನಲ್ಲಿ ತಿಂಡಿ ತಿನ್ನುವುದು ವಿಲಾಸಿತನ" ಎಂಬ ಟಿಪ್ಪಣಿಯನ್ನು ಶ್ರೀನಿವಾಸ ಶೆಟ್ಟಿ ತಮ್ಮ ಬಿಲ್‌ನಲ್ಲಿ ಮುದ್ರಿಸಿದ್ದರು.

ಈ ವಿಷಯ ತಿಳಿದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಅದಿತಿ ಪ್ಯೂರ್ ವೆಜ್ ರೆಸ್ಟೋರೆಂಟ್‌ನ್ನು ಬಂದ್ ಮಾಡುವಂತೆ ಸೋಮವಾರ ಒತ್ತಾಯಿಸಿದ್ದರು.

ಮುಂಬೈ ನಗರ ಕಾಂಗ್ರೆಸ್ ಪಕ್ಷದ ಯೂತ್ ವಿಂಗ್‌ನ ಅಧ್ಯಕ್ಷ ಗಣೇಶ್  ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದಿತಿ ಪ್ಯೂರ್ ವೆಜ್ ರೆಸ್ಟೋರೆಂಟ್‌ನ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ್ದರು. ಏತನ್ಮಧ್ಯೆ, ದೆಹಲಿಯಿಂದ ತಮ್ಮ ನಾಯಕರ ಆದೇಶ ಅನುಸರಿಸಿ ತಾವು ಪ್ರತಿಭಟನೆ ನಡೆಸಿದ್ದಾಗಿ ಕಾರ್ಯಕರ್ತರು ಒಪ್ಪಿಕೊಂಡಿದ್ದಾರೆ.

ಅದೇ ವೇಳೆ ಶ್ರೀನಿವಾಸ ಶೆಟ್ಟಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಬೊಯಿವಾಡಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ.

ಇದಾದ ನಂತರ ಹೋಟೆಲ್ ಮಾಲೀಕರ ವಿರುದ್ದ ಕೋರ್ಟ್ ಆದೇಶವಿಲ್ಲದೆಯೇ ಪೊಲೀಸರು ಬಂಧನ ಮಾಡಬಹುದಾದಂತಹ ದೂರು ದಾಖಲಿಸಲಾಗಿದೆ. ಮಾತ್ರವಲ್ಲದೆ ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 501ರ ಪ್ರಕಾರ ಮಾಲೀಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಇತ್ತೀಚೆಗೆ ಎಸಿ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸುವ ಗ್ರಾಹಕರಿಗೆ ಹೆಚ್ಚಿನ ಸೇವಾ ತೆರಿಗೆಯನ್ನು ಕೇಂದ್ರ ಸರ್ಕಾರ ವಿಧಿಸಿತ್ತು.

ಆದಾಗ್ಯೂ, ಪ್ರಸ್ತುತ ರೆಸ್ಟೋರೆಂಟ್ ಇಂದು ಪುನಾರಂಭಗೊಂಡಿದ್ದರೂ, ಬಿಲ್‌ನಲ್ಲಿರುವ ಲಘು ಟಿಪ್ಪಣಿ ಹಾಗೆಯೇ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.