ಈಗಿನ ಸುದ್ದಿ

ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಶಾಸಕರ ಅಮಾನತು ರದ್ದು

Published On :

ಮುಂಬೈ: ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಅಮಾನತುಗೊಂಡಿದ್ದ ಮಹಾರಾಷ್ಟ್ರ ವಿಧಾನಸಭೆಯ ಐವರು ಶಾಸಕರ ಅಮಾನತು ನಿರ್ಧಾರವನ್ನು ಬುಧವಾರ ರದ್ದುಗೊಳಿಸಲಾಗಿದೆ.

ವಾಸೈ ಶಾಸಕ ಕ್ಷಿತಿಜ್ ಠಾಕೂರ್, ಎಂಎನ್‌ಎಸ್ ಶಾಸಕ ರಾಮ್ ಕದಂ, ರಾಜನ್ ಸಾಲ್ವಿ (ಶಿವಸೇನೆ), ಪ್ರದೀಪ್ ಜೈಸ್ವಾಲ್ (ಸ್ವತಂತ್ರ) ಮೊದಲಾದ ಶಾಸಕರನ್ನು ಮಾರ್ಚ್ 20ಕ್ಕೆ ಅಮಾನತುಗೊಳಿಸಲಾಗಿತ್ತು. ಅಮಾನತು ಅವಧಿ ಈ ವರ್ಷದ ಕೊನೆಯ ವರೆಗೆ ಎಂದು ಈ ಮೊದಲು ನಿರ್ಧರಿಸಲಾಗಿದ್ದರೂ, ಇದೀಗ ಶಾಸಕರ ಅಮಾನತು ರದ್ದುಗೊಳಿಸವಾಗಿದೆ.

ವಿಧಾನಸಭೆಯ ಮೊದಲನೆ ಮಹಡಿಯಲ್ಲಿದ್ದ ಪೊಲೀಸ್ ಅಧಿಕಾರಿಯ ಮೇಲೆ ಈ ಶಾಸಕರು ಹಲ್ಲೆ ಮಾಡಿದ್ದರು. ಎಫ್‌ಐಆರ್ ಪ್ರಕಾರ ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಸೂರ್ಯವಂಶಿ ಎಂದು ಹೇಳಲಾಗುತ್ತಿದೆ.

ಹಲ್ಲೆಗೆ ಕಾರಣ?

ಕ್ಷಿತಿಜ್ ಠಾಕೂರ್ ವಿಧಾನಸಭಾ ಕಲಾಪಕ್ಕೆ ಆಗಮಿಸುತ್ತಿದ್ದ ವೇಳೆ ಸೂರ್ಯವಂಶಿ ಅವರು ಠಾಕೂರ್ ಅವರ ಕಾರನ್ನು ನಿಲ್ಲಿಸಿದ್ದರು. ಠಾಕೂರ್ ಹೈ ಸ್ಪೀಡ್‌ನಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಸೂರ್ಯವಂಶಿ ಕಾರು ನಿಲ್ಲಿಸಲು ಹೇಳಿದ್ದು ಆ ವೇಳೆ ಶಾಸಕ ಮತ್ತು ಪೊಲೀಸ್ ನಡುವೆ ಮಾತಿನ ಚಕಮಕಿ ನಡೆದಿತ್ತು.

ಇದಾದನಂತರ ಸೂರ್ಯವಂಶಿ ಅವರನ್ನು ಅಮಾನತುಗೊಳಿಸಬೇಕೆಂದು ಶಾಸಕರು ಒತ್ತಾಯಿಸಿದ್ದರು.

ಅದೊಂದು ದಿನ ಸೂರ್ಯವಂಶಿ ಅವರು ವಿಸಿಟರ್ಸ್ ಗ್ಯಾಲರಿಯಲ್ಲಿ ಕುಳಿತಿರುವಾಗ, ಸೂರ್ಯವಂಶಿ ತಮ್ಮನ್ನು ನೋಡಿ ಚೇಷ್ಟೆ ಮಾಡಿದರು ಎಂದು ಆರೋಪಿಸಿ ಶಾಸಕರು ಸೂರ್ಯವಂಶಿ ಮೇಲೆ ಹಲ್ಲೆಗೈದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.