ಮೋದಿ ವೀಸಾ ಬಗ್ಗೆ ಒಬಾಮಾಗೆ ಕಳುಹಿಸಿದ ಪತ್ರದಲ್ಲಿ ನಕಲಿ ಸಹಿ ಬಳಕೆ?

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾ ನಿರಾಕರಿಸುವ ಅಮೆರಿಕದ ನೀತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಬೇಡಿ ಎಂದು ಬಯಸಿ 65 ಸಂಸದರು ಒಬಾಮಾಗೆ ಸಹಿ ಮಾಡಿ ಕಳುಹಿಸಿದ ಪತ್ರ ನಕಲಿ ಎಂದು ಹೇಳಲಾಗುತ್ತಿದೆ. ಈ ಪತ್ರದಲ್ಲಿ ತಮ್ಮ ನಕಲಿ ಸಹಿಯನ್ನು ಬಳಸಲಾಗಿದೆ ಎಂದು ಕೆಲವೊಂದು ಸಂಸದರು ದೂರಿರುವುದರಿಂದ ಈ ಪತ್ರದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳೆದ್ದಿವೆ.
ಸಿಪಿಎಂನ ಹಿರಿಯ ನೇತಾರ ಸೀತಾರಾಂ ಯೆಚೂರಿ ಅವರು ಮೋದಿಯವರಿಗೆ ವೀಸಾ ನಿರಾಕರಣೆ ಮಾಡುವಂತೆ ಮನವಿ ಸಲ್ಲಿಸಿರುವ ಪತ್ರಕ್ಕೆ ತಾವು ಸಹಿ ಮಾಡಿಲ್ಲ ಎಂದು ಹೇಳಿದ್ದಾರೆ.
ನಾನು ಅಂಥ ಯಾವುದೇ ಪತ್ರಗಳಿಗೆ ಸಹಿ ಮಾಡಿಲ್ಲ. ಇಂಥಾ ಪತ್ರಗಳಿಗೆ ಸಹಿ ಮಾಡುವುದು ನನ್ನ ಹಾಗು ನನ್ನ ಪಕ್ಷದ ನಿಯಮಗಳಿಗೆ ಅತೀತವಾಗಿದೆ.
ಅದೇ ವೇಳೆ ನಮ್ಮ ದೇಶದ ಆಂತರಿಕ ಸಮಸ್ಯೆಗಳಿಗೆ ಇನ್ಯಾವುದೇ ದೇಶಗಳು ಮೂಗು ತೂರಿಸುವುದು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಶೋಭೆ ತರುವಂತದಲ್ಲ ಎಂದು ಯೆಚೂರಿ ಬುಧವಾರ ಹೇಳಿಕೆ ನೀಡಿದ್ದಾರೆ.
ಮೋದಿ ಅವರಿಗೆ ವೀಸಾ ನಿರಾಕರಿಸುವಂತೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ 65 ಸಂಸದರು ಸಹಿ ಹಾಕಿದ ಪತ್ರವನ್ನು ಕಳುಹಿಸಲಾಗಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಯೆಚೂರಿ ಈ ಹೇಳಿಕೆ ನೀಡಿದ್ದಾರೆ.
ಆದಾಗ್ಯೂ, ರಾಜ್ಯ ಸಭೆಯ ಸಂಸದ (ಸ್ವತಂತ್ರ) ಮೊಹಮ್ಮದ್ ಅದೀಬ್, ಈ ಪತ್ರಕ್ಕೆ ಯೆಚೂರಿ ಅವರು ಸಹಿ ಹಾಕಿದ್ದಾರೆ. 6 ತಿಂಗಳ ಹಿಂದೆ ಅವರು ಪತ್ರಕ್ಕೆ ಸಹಿ ಹಾಕಿದ್ದು, ಅವರೀಗ ಅದನ್ನು ಮರೆತಂತಿದೆ. ಆದ್ದರಿಂದಲೇ ಅವರು ನಾನು ಅವರ ನಕಲಿ ಸಹಿ ಬಳಸಿದ್ದೀನಿ ಅಂತ ಊಹಿಸಿದ್ದಾರೆ. 2012 ನವಂಬರ್ನಲ್ಲಿ ಬರೆದ ಪತ್ರದಲ್ಲಿ ಅವರ ಹೆಸರು, ಸಹಿ ಇದೆ ಎಂದು ವಾದಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


