ಕೇಂದ್ರದ ಬಡತನ ವ್ಯಾಖ್ಯಾನ 'ದೊಡ್ಡ ಜೋಕ್': ನಿತೀಶ್

ಪಾಟ್ನಾ: ಯೋಜನಾ ಆಯೋಗದ ಬಡತನ ಗುರುತಿಸುವಿಕೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಇದು ಬಡವರ ಮೇಲಿನ ದೊಡ್ಡ ಜೋಕ್ ಎಂದಿದ್ದಾರೆ.
ಕೇಂದ್ರ ಸರ್ಕಾರದ ಬಡತನ ನಿಗದಿ ಪ್ರಮಾಣವನ್ನು ನಾವು ಒಪ್ಪಿಕೊಳ್ಳುವುದಿಲ್ಲ... ಆಹಾರಾಂಶ ಮತ್ತು ಹಣದ ಮೇಲೆ ಬಡತನವನ್ನು ನಿರ್ಧರಿಸಬಾರದು. ಆದರೆ ಗೌರವಯುತ ಜೀವನದ ಆಧಾರದ ಮೇಲೆ ಬಡತನ ನಿರ್ಧರಿಸಬೇಕು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ದಿನವೊಂದಕ್ಕೆ ನಗರದಲ್ಲಿ 32 ಹಾಗೂ ಗ್ರಾಮೀಣ ಪ್ರದೇಶದಲ್ಲಿ 27 ರುಪಾಯಿಗಿಂತ ಹೆಚ್ಚು ಸಂಪಾದನೆ ಮಾಡುವವರು ಬಡತನ ರೇಖೆಗಿಂತ ಕೆಳಗಿನವರಲ್ಲ ಎಂಬ ಕೇಂದ್ರ ಸರ್ಕಾರದ ವ್ಯಾಖ್ಯಾನವನ್ನು ಬಿಹಾರ ಸಿಎಂ ಒಂದು ದೊಡ್ಡ ಜೋಕ್ ಎಂದಿದ್ದಾರೆ.
12 ರುಪಾಯಿಗೆ ಮುಂಬೈನಲ್ಲಿ ಫುಲ್ ಊಟ ಸಿಗುತ್ತದೆ ಎಂಬ ಕಾಂಗ್ರೆಸ್ ಸಂಸದ ರಾಜ್‌ಬಬ್ಬರ್ ಹೇಳಿಕೆ ಹಾಗೂ ದೆಹಲಿಯ ಜಾಮಾ ಮಸೀದಿ ಬಳಿ 5 ರುಪಾಯಿಗೆ ಹೊಟ್ಟೆ ತುಂಬ ಊಟ ಸಿಗುತ್ತದೆ ಎಂಬ ಕಾಂಗ್ರೆಸ್ ವಕ್ತಾರ ರಶೀದ್ ಮಸೂದ್ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


