ಈಗಿನ ಸುದ್ದಿ

ಪ್ರತ್ಯೇಕ ತೆಲಂಗಾಣ ಬೇಡ; ಆಂಧ್ರ ಸಚಿವ, ಸಂಸದರಿಂದ ಮನವಿ

Published On :

ನವದೆಹಲಿ:  ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರ ಒಲವು ತೋರಿದ್ದರಿಂದ, ಆಂಧ್ರ ಪ್ರದೇಶ ಮತ್ತು ರಾಯಲ್‌ಸೀಮೆಯ ಸಚಿವರು ಮತ್ತು ಸಂಸದರು ಪ್ರಧಾನಿಯವರನ್ನು ಭೇಟಿ ಮಾಡಿ, ತಮ್ಮ ರಾಜ್ಯ ವಿಭಜನೆ ಮಾಡುವುದು ಬೇಡ ಎಂದು ವಿನಂತಿಸಿದ್ದಾರೆ.

ಕೇಂದ್ರ ಸಚಿವರಾದ ಎಂ.ಎಂ ಪಲ್ಲಂ ರಾಜು, ಕೆಎಸ್ ರಾವ್, ಚಿರಂಜೀವಿ ಮತ್ತು ಡಿ. ಪುರಂದೇಶ್ವರಿ ಮತ್ತು  ಸಂಸದರಾದ ಬಪಿರಾಜು ಮತ್ತು ಅನಂತರಾಮಿ ರೆಡ್ಡಿ ಮೊದಲಾದವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಬೇಡ ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿಯವರನ್ನು ಭೇಟಿ ಮಾಡಿದ ಸಚಿವರ ತಂಡ, ತೆಲಂಗಾಣ ರಚನೆ ತಮ್ಮ ರಾಜ್ಯ ಹಾಗು ದೇಶದ ಆಸಕ್ತಿಯಾಗಿಲ್ಲ ಎಂದು ಮನದಟ್ಟು ಮಾಡಿದ್ದಾರೆ.

ತೆಲಂಗಾಣ ರಚನೆಯ ಬೇಡಿಕೆ ಬಗ್ಗೆ ನಿನ್ನೆ ಕಾಂಗ್ರೆಸ್ ನಾಯಕತ್ವದಲ್ಲಿ ಉನ್ನತ ಮಟ್ಟದ ಚರ್ಚೆ ನಡೆದಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಆಂಧ್ರಪ್ರದೇಶದ ಉಸ್ತುವಾರಿ ವಹಿಸಿರುವ ದಿಗ್ವಿಜಯ್ ಸಿಂಗ್ ಮತ್ತು ಅವರ ಗುಲಾಂ ನಬೀ ಆಜಾದ್ ಅವರು ಆಂಧ್ರ ಸಿಎಂ ಎನ್. ಕಿರಣ್ ಕುಮಾರ್ ರೆಡ್ಡಿ, ಪಿಸಿಸಿ ಮುಖ್ಯಸ್ಥ ಬೋಸ್ತಾ ಸತ್ಯ ನಾರಾಯಣ ಮತ್ತು ಉಪ ಮುಖ್ಯಮಂತ್ರಿ ದಾಮೋದರ್ ರಾಜನರಸಿಂಹ ಜತೆ ಪ್ರತ್ಯೇಕ ಮಾತುಕತೆ ನಡೆಸಿದ್ದರು.

ಬಲ್ಲಮೂಲಗಳ ಪ್ರಕಾರ ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರ ಆಂಧ್ರಪ್ರದೇಶ ವಿಭಜನೆ ಮಾಡಲು ಉತ್ಸುಕತೆ ತೋರುತ್ತಿದ್ದು, ಈ ತಿಂಗಳಾಂತ್ಯದಲ್ಲಿ ಸ್ಥಳೀಯ ಚುನಾವಣೆ ಮುಗಿದ ನಂತರವೇ ತಮ್ಮ ನಿರ್ಧಾರ ಪ್ರಕಟಿಸಲು ತೀರ್ಮಾನಿಸಿವೆ.

ಆದ್ದರಿಂದ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಬಗ್ಗೆ ಆಗಸ್ಟ್ ಮೊದಲನೆ ವಾರ ಯುಪಿಎ ತಮ್ಮ ನಿರ್ಧಾರವನ್ನು ತಿಳಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.