ಈಗಿನ ಸುದ್ದಿ

ಮೋದಿ ಜನಪ್ರಿಯ ನಾಯಕ: ಸಮೀಕ್ಷೆ

ಮೋದಿ ಜನಪ್ರಿಯ ನಾಯಕ: ಸಮೀಕ್ಷೆ
Published On :

ನವದೆಹಲಿ: ಭಾರತದಲ್ಲಿ ನರೇಂದ್ರ ಮೋದಿಯವರೇ ಜನಪ್ರಿಯ ನಾಯಕ ಎಂದು ಸಮೀಕ್ಷೆಯೊಂದು ಹೇಳಿದೆ.
 
ತಮ್ಮ ಪ್ರತಿಸ್ಪರ್ಧಿಗಳನ್ನು ಕನಿಷ್ಠ ಅಂತರಗಳಿಂದ ಪರಾಭವಗೊಳಿಸಿ, ಮೋದಿ ಅವರು ಜನಪ್ರಿಯ ನಾಯಕ ಎಂಬ ಪಟ್ಟಗಳಿಸಿಕೊಂಡಿದ್ದಾರೆ. ಆದ್ದರಿಂದ ಮೋದಿ ನಾಯಕತ್ವದಲ್ಲಿ ತಮ್ಮ ಪಕ್ಷ ಉತ್ತಮ ಆಡಳಿತ ನೀಡಬಲ್ಲದು ಎಂದು ಭರವಸೆ ಬಿಜೆಪಿಗೆ ಇನ್ನಷ್ಟು ಶಕ್ತಿ ನೀಡಿದೆ.

2013 ಮತ್ತು 2011ರಲ್ಲಿ ನಡೆಸಿದ ಎರಡೂ ಸಮೀಕ್ಷೆಗಳಲ್ಲಿಯೂ ಮೋದಿ ಜನಪ್ರಿಯ ನಾಯಕರೆಂದು ಸಾಬೀತಾಗಿದೆ. ಸಿಎನ್‌ಎನ್ -ಐಬಿಎನ್ ಮತ್ತು ದ ಹಿಂದೂ ಪತ್ರಿಕೆಗಳಿಗಾಗಿ ಸಿಎಸ್‌ಡಿಎಸ್ ಈ ಸಮೀಕ್ಷೆ ನಡೆಸಿತ್ತು.  2011ರಲ್ಲಿ ದೆಹಲಿ ಮೂಲದ ರಿಸರ್ಚ್ ಸಂಸ್ಥೆಯೊಂದು  ಇದೇ ರೀತಿಯ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಮೋದಿಯ ಜನಪ್ರಿಯತೆ ಶೇ.5 ಆಗಿತ್ತು. ಆದರೆ ಈಗ ಅದು ಶೇ.19ಕ್ಕೆ ಏರಿದೆ.

ಮೋದಿಯ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಶೇ.12 ರಷ್ಟು ಜನಪ್ರಿಯತೆ ಗಳಿಸಿಕೊಂಡು 2 ನೇ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ಎಲ್.ಕೆ ಆಡ್ವಾಣಿಯವರಿಗೆ ಶೇ.2 ರಷ್ಟು ಜನಪ್ರಿಯತೆ ಲಭಿಸಿದೆ.

ಏತನ್ಮಧ್ಯೆ, ಮೋದಿ ಮತ್ತು  ರಾಹುಲ್ ಪ್ರಧಾನಿ ಆಕಾಂಕ್ಷಿಗಳಾಗಿದ್ದು, ಇವರಿಬ್ಬರ ನಡುವೆ ಜನಪ್ರಿಯತೆಯ ಅಂತರ ಕನಿಷ್ಠವಾಗಿದೆ.

ಇದು ಮಾತ್ರವಲ್ಲದೆ ಮುಂದಿನ ಪ್ರಧಾನಿ ಯಾರು ಆಗಬೇಕು? ಎಂದು ಜನರಲ್ಲಿ ಕೇಳಿದಾಗ 33 ಶೇ. ಜನ ಮೋದಿ ಎಂದೂ, 31 ಶೇ. ಜನ ರಾಹುಲ್ ಆಗಬೇಕೆಂದು ಹೇಳಿದ್ದಾರೆ. ಪರಿಶಿಷ್ಟರು, ಮುಸ್ಲಿಂ ಮತ್ತು ದಕ್ಷಿಣದ ರಾಜ್ಯಗಳಲ್ಲಿ ರಾಹುಲ್ ಪ್ರಿಯರಾಗಿದ್ದಾರೆ. ಅದೇ ವೇಳೆ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ರಾಹುಲ್ ಮೇಲುಗೈ ಸಾಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.