ಈಗಿನ ಸುದ್ದಿ

ಮೊರ್ಸಿ ಬೆಂಬಲಿಗರು-ಸೇನೆ ನಡುವೆ ಸಂಘರ್ಷ: 70ಕ್ಕೂ ಹೆಚ್ಚು ಸಾವು

Published On :

ಕೈರೋ: ಈಜಿಪ್ಟ್‌ನ ಪದಚ್ಯುತಗೊಂಡ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರ ಬೆಂಬಲಿಗರ ಮೇಲೆ ಶನಿವಾರ ಸೇನೆ ದಾಳಿ ನಡೆಸಿದ್ದು, ಈ ಸಂಘರ್ಷದಲ್ಲಿ 70ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಕೈರೋದ ಮಸೀದಿಯ ಪಕ್ಕ ಮೊರ್ಸಿ  ಬೆಂಬಲಿಗರು ಸೇರಿದ್ದಾಗ ಈಜಿಪ್ಟ್ ಸೇನೆ ದಾಳಿ ನಡೆಸಿದೆ. ಈ ದಾಳಿಯಲ್ಲಿ  120 ಮಂದಿ ಸಾವಿಗೀಡಾಗಿದ್ದು, 4500 ಜನರಿಗೆ ಗಾಯಗಳಾಗಿವೆ ಎಂದು ಅಲ್ ಜಜೀರಾದ ಈಜಿಪ್ಟ್ ಸುದ್ದಿವಾಹಿನಿಯೊಂದು ವರದಿ ಮಾಡಿತ್ತು.

ಆದರೆ ಈ ಸಂಘರ್ಷದಲ್ಲಿ 70ಕ್ಕಿಂತಲೂ ಹೆಚ್ಚು ಜನ ಸತ್ತಿದ್ದಾರೆ ಎಂದು ಮುಸ್ಲಿಂ ಬ್ರದರ್‌ಹುಡ್ ವಕ್ತಾರ ಗಹೇದ್ ಇಲ್ ಹಡ್ಡದ್ ಹೇಳಿದ್ದಾರೆ.

ಮೂರು ವಾರಗಳ ಹಿಂದೆ ಪದಚ್ಯುತಗೊಂಡ ಮೊರ್ಸಿ ಅವರ ಬೆಂಬಲಿಗರು ಬೆಳಗ್ಗಿನ ಜಾವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ.

ಈಜಿಪ್ಟ್ ಸೇನೆ ಬೆಂಬಲಿಗರನ್ನು ಗಾಯ ಮಾಡುವ ಸಲುವಾಗಿ ಗುಂಡು ಹಾರಿಸಿಲ್ಲ, ಅವರ ಉದ್ದೇಶ ನಮ್ಮನ್ನು ಕೊಲ್ಲುವುದಾಗಿತ್ತು. ಜನರ ತಲೆ ಮತ್ತು ಎದೆಭಾಗದಲ್ಲಿ ಗುಂಡಿನ ಗಾಯಗಳಿವೆ ಎಂದು ಹಡ್ಡದ್ ಹೇಳಿದ್ದಾರೆ.

ಶುಕ್ರವಾರ ಮುರ್ಸಿ ಅವರ ಬೆಂಬಲಿಗರು ಮತ್ತು ವಿರೋಧಿಗಳು ದೇಶಾದ್ಯಂತ ರ್ಯಾಲಿ ನಡೆಸಿದ್ದರು.

ಆದಾಗ್ಯೂ, ಮುರ್ಸಿ ಅವರು ಪದಚ್ಯುತಗೊಂಡ ನಂತರ ನಡೆದ ಸಂಘರ್ಷದಲ್ಲಿ ಸುಮಾರು 200 ಜನ ಸಾವಿಗೀಡಾಗಿದ್ದರು. ಸಾವಿಗೀಡಾದ ಜನರೆಲ್ಲರೂ ಬ್ರದರ್‌ಹುಡ್ ಬೆಂಬಲಿಗರಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.