ಈಗಿನ ಸುದ್ದಿ

ಜಿಂಬಾವ್ವೆ ಪರಾಭವಗೊಳಿಸಿ ಮುನ್ನಡೆ ಸಾಧಿಸಿದ ಭಾರತ

Published On :

ಹರಾರೆ: ಜಿಂಬಾಬ್ವೆ ವಿರುದ್ಧ ಭಾನುವಾರ ನಡೆದ ಮೂರನೇ ಪಂದ್ಯದಲ್ಲಿ ಎಲ್ಲರೂ ನಿರೀಕ್ಷಿಸಿದಂತೆ ಭಾರತ ಜಿಂಬಾಬ್ವೆ ತಂಡವನ್ನು ಏಳು ವಿಕೆಟ್ಗಳಿಂದ ಪರಾಭವಗೊಳಿಸಿ ಪ್ರಸ್ತುತ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

5 ಪಂದ್ಯಗಳಿರುವ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾನುವಾರ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

ಕಳೆದೆರಡು ಪಂದ್ಯಗಳಲ್ಲಿ ಭಾರತ ಜಿಂಬಾಬ್ವೆಯನ್ನು ಪರಾಭವಗೊಳಿಸಿದ್ದು, ಇದೀಗ ಜಿಂಬಾಬ್ವೆ ವಿರುದ್ಧ ಭಾರತ 3-0 ಮುನ್ನಡೆ ಸಾಧಿಸಿದೆ.

ಸುರೇಶ್ ರೈನಾ ಅವರ ಅಜೇಯ 28 ರನ್ ಮತ್ತು ಕೊಹ್ಲಿ ಅವರ 68 (ಅಜೇಯ )ರನ್ಗಳ ಸಹಾಯದಿಂದ ಭಾರತ 36ನೇ ಓವರ್ನಲ್ಲಿ ತಮ್ಮ ಗುರಿ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 46 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 183 ರನ್ ಗಳಿಸಿಕೊಂಡಿತ್ತು. ಈ ಪಂದ್ಯದಲ್ಲಿ ಭಾರತ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರಿಂದ ಜಿಂಬಾಬ್ವೆ ತಂಡದ ರನ್ ಗತಿಗೆ ಕಡಿವಾಣ ಹಾಕಲು ಸಾಧ್ಯವಾಯ್ತು.

ಜಿಂಬಾಬ್ವೆ ಗುರಿಯನ್ನು ಬೆನ್ನು ಹತ್ತಿ ಹೊರಟ ಕೊಹ್ಲಿ ಪಡೆಗೆ 6ನೇ ಓವರ್ವಲ್ಲಿ ರೋಹಿತ್ ಶರ್ಮಾ (14 ರನ್ ) ವಿಕೆಟ್ ನಷ್ಟವಾಯಿತು. ನಂತರ ಕ್ರೀಸ್ಗಿಳಿದ ಶಿಖರ್ ಧವನ್  ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದ್ದರೂ 15 ನೇ ಓವರ್ನಲ್ಲಿ ಚಟಾರಾ ಬಾಲ್ಗೆ ವಿಕೆಟ್ ಕಳೆದುಕೊಂಡರು. ಧವನ್ 62 ಬಾಲ್ಗಳನ್ನೆದುರಿಸಿ 35 ರನ್ ಗಳಿಸಿದ್ದಾರೆ. ಇದಾದ ನಂತರ ರಾಯ್ಡು 33 ರನ್ ಗಳಿಸಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು.

ಈ ಪಂದ್ಯದಲ್ಲಿ ಕೊಹ್ಲಿ ಸಮಯೋಜಿತ ಪ್ರದರ್ಶನ ನೀಡುವ ಮೂಲಕ ಶರ್ಮಾ ಅವರಿಗೆ ಉತ್ತಮ ಸಾಥ್ ನೀಡಿದ್ದು, ಇವರಿಬ್ಬರ ಜತೆಯಾಟದಲ್ಲಿ ಭಾರತ 187 ರನ್ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.

ಭಾರತದ ಪರ ಮಿಶ್ರಾ 4, ಮೊಹಮ್ಮದ್ ಶಮಿ 2 ,ವಿನಯ್ ಕುಮಾರ್, ಉನದ್ಕತ್ ಮತ್ತು ಜಡೇಜಾ ತಲಾ 1 ವಿಕೆಟ್ ಗಳಿಸಿದ್ದಾರೆ.

ಜಿಂಬಾಬ್ವೆ ತಂಡದಲ್ಲಿ ವಿಟ್ಟೋರಿ, ಚಿನವ್ಯ ಮತ್ತು ಚಟಾರಾ ತಲಾ 1 ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ವೇಳೆ ಬ್ಯಾಟಿಂಗ್ನಲ್ಲಿ ವಿಲಿಯಮ್ಸ್ 45 ರನ್ ಗಳಿಸಿದ್ದು, ಮಸಕಡ್ಸಾ 38 ರನ್ ಗಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.