ಒಬಾಮಾಗೆ ಬರೆದ ಪತ್ರದಲ್ಲಿ ಸಂಸದರ ಸಹಿ ಅಸಲಿ
ನ್ಯೂಯಾರ್ಕ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾ ನಿರಾಕರಿಸಿ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಸಂಸದರು ಕಳುಹಿಸಿದ ಪತ್ರದಲ್ಲಿ ಸಂಸದರ ಸಹಿ ನಕಲಿಯಲ್ಲ. ಕೆಲವೊಂದು ಸಂಸದರು ಹೇಳಿದಂತೆ ಯಾವುದೇ ರೀತಿಯಲ್ಲಿ ಅವರ ನಕಲಿ ಸಹಿಯನ್ನು ಪತ್ರದಲ್ಲಿ ಬಳಸಲಾಗಿಲ್ಲ ಎಂದು ಕ್ಯಾಲಿಫೋರ್ನಿಯಾ ಮೂಲದ ಫಾರೆನ್ಸಿಕ್ ತಜ್ಞರು ಹೇಳಿದ್ದಾರೆ.
ಫಾರೆನ್ಸಿಕ್ ಪರೀಕ್ಷೆಯಲ್ಲಿ ತಿಳಿದು ಬಂದ ವಿಷಯವೇನೆಂದರೆ, ಪತ್ರದQ1-Q3 ಪುಟದಲ್ಲಿ (ರಾಜ್ಯಸಭಾ ಸಂಸದರ ಸಹಿಯಿರುವ ಪುಟ) ಬಳಸಲಾಗಿರುವ ಸಹಿ, ಅಸಲಿ ಮತ್ತು ಅಧಿಕೃತವಾಗಿದೆ ಎಂದು ಫಾರೆನ್ಸಿಕ್ ತಜ್ಞರು ಹೇಳಿದ್ದಾರೆ.
ರಾಜ್ಯಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರು ನವಂಬರ್ 26 ಮತ್ತು ಡಿಸೆಂಬರ್ 5ರಂದು ಒಬಾಮಾ ಅವರಿಗೆ ಬರೆದ ಪತ್ರವನ್ನು ಜುಲೈ 21ಕ್ಕೆ ವೈಟ್‌ಹೌಸ್‌ಗೆ ಮತ್ತೊಮ್ಮೆ ಫ್ಯಾಕ್ಸ್ ಮಾಡಲಾಗಿತ್ತು. ಈ ಪತ್ರವನ್ನು ಕ್ಯಾಲಿಪೋರ್ನಿಯಾದ ಫಾರೆನ್ಸಿಕ್ ತಜ್ಞ ನಾನೆಟ್ಟೆ ಎಂ ಬಾರ್ಟೋ ಪರೀಕ್ಷೆಗೊಳಪಡಿಸಿದ್ದು, ಪತ್ರದಲ್ಲಿ ನಕಲಿ ಸಹಿ ಬಳಸಲಾಗಿಲ್ಲ ಎಂದು ಹೇಳಿದ್ದಾರೆ.
ಇದೀಗ ಪತ್ರದಲ್ಲಿ ಬಳಸಿರುವ ಸಹಿ ಅಸಲಿ ಮತ್ತು ಅಧಿಕೃತವಾಗಿರುವುದರಿಂದ ಮೋದಿ ವೀಸಾ ಪ್ರಕರಣಕ್ಕೆ ಹೊಸ ತಿರುವೊಂದು ಸಿಕ್ಕಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

