ಈಗಿನ ಸುದ್ದಿ

ರಾಜ್ಯ ಸಭಾ ಸದಸ್ಯತ್ವ 100 ಕೋಟಿಗೆ ಲಭ್ಯ: ಕಾಂಗ್ರೆಸ್ ಎಂಪಿ

Published On :

ನವದೆಹಲಿ: ಕಾಂಗ್ರೆಸ್ ರಾಜ್ಯ ಸಭಾ ಸದಸ್ಯತ್ವ 100 ಕೋಟಿಗೆ ಲಭ್ಯವಾಗಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸಂಸತ್ ಸದಸ್ಯ ಹರ್ಯಾಣ ಬಿರೇಂದರ್ ಸಿಂಗ್ ಅವರು ಸೋಮವಾರ ವಿವಾದಕ್ಕೆಡೆ ಮಾಡಿಕೊಟ್ಟಿದ್ದಾರೆ.

ಅಂತೂ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್ ಹಾರಾಜಿಗಿಟ್ಟಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸದಸ್ಯ ಹೇಳಿಕೆ ನೀಡಿರುವುದು ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಸಂಸತ್ ಸದಸ್ಯರಾದ ಹರ್ಯಾಣ ಬೀರೇಂದರ್ ಸಿಂಗ್ ಅವರು, ಕಾಂಗ್ರೆಸ್ ರಾಜ್ಯಸಭಾ ಸದಸ್ಯತ್ವ ಬೇಕಾದರೆ ನೂರು ಕೋಟಿ ಬೇಕು ಎಂದು ತಮ್ಮ ಬಳಿ ಒಬ್ಬರು ಹೇಳಿಕೊಂಡಿದ್ದರು. ಆದರೆ ನಂತರ 80 ಕೋಟಿ ರು.ಗಳನ್ನು ನೀಡಿ ಸ್ಥಾನ ಗಿಟ್ಟಿಸಿಕೊಂಡು 20 ಕೋಟಿ ಉಳಿತಾಯ ಮಾಡಿದ್ದೇನೆ ಎಂದಿದ್ದರು.

ರಾಜ್ಯಸಭಾ ಸ್ಥಾನಕ್ಕಾಗಿ ಜನರು 100 ಕೋಟಿ ನೀಡಲು ಸಿದ್ದವಿದ್ದಾಗ ದೇಶ ಬಡತನದಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯ ಸಭಾ ಸದಸ್ಯರಾಗಲು ಜನರು ನೂರು ಕೋಟಿ ನೀಡಿದರೆ ಸಾಕು ಎಂದು ಬಿರೇಂದರ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಸಿಂಗ್ ಹೇಳಿಕೆ ನೀಡುತ್ತಿದ್ದಂತೆ ಇತ್ತ ಪ್ರತಿಕ್ರಿಯೆ ನೀಡಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಪ್ರಕಾಶ್ ಜಾವೇದ್‌ಕರ್ ಅವರು, ಬಹುಶಃ ಸಿಂಗ್ ಹೀಗೆ ಮಾಡಿಯೇ ಸದಸ್ಯತ್ವ ಪಡೆದಿರಬೇಕು. ಇದರ ಅನುಭವವನ್ನು ಉದಾಹರಣೆಯಾಗಿ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ರಾಜ್ಯಸಭಾ ಸ್ಥಾನವನ್ನು ಹಣಕ್ಕಾಗಿ ಮಾರಿಕೊಳ್ಳವ ಅಭ್ಯಾಸ ರೂಢಿಸಿಕೊಂಡಿದೆ. ಇಂತಹ ಕೆಲಸಗಳನ್ನು ಮಾಡುತ್ತಿರುವ ಕಾಂಗ್ರೆಸ್ ರಾಜಕೀಯವನ್ನು ತುಂಬಾ ಕೆಳಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಬಿರೇಂದರ್ ಸಿಂಗ್ ಅವರು ಹಿಮಾಚಲ ಪ್ರದೇಶದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಆದರೆ ಮತ್ತೆ ಸಮಿತಿ ಪುನರ್ರಚನೆಯಾದಾಗ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.