ಈಗಿನ ಸುದ್ದಿ

ಪಾಕಿಸ್ತಾನದ ಜೈಲಿನ ಮೇಲೆ 100 ತಾಲಿಬಾನ್ ಉಗ್ರರ ದಾಳಿ

Published On :

ಡೇರಾ ಇಸ್ಮಾಯಿಲ್ ಖಾನ್: 7 ಆತ್ಮಾಹುತಿ ಬಾಂಬರ್‌ಗಳು ಸೇರಿದಂತೆ 100 ತಾಲಿಬಾನ್ ಉಗ್ರರು ಸೋಮವಾರ ರಾತ್ರಿ ಪಾಕಿಸ್ತಾನದ ಜೈಲಿನ ಮೇಲೆ ದಾಳಿ ನಡೆಸಿದ್ದಾರೆ.

ಪಾಕಿಸ್ತಾನದ ವಾಯುವ್ಯ ದಿಕ್ಕಿನಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಪಟ್ಟಣದಲ್ಲಿರುವ ಕೇಂದ್ರ ಜೈಲಿನ ಮೇಲೆ ಉಗ್ರರು ದಾಳಿ ನಡೆಸಿದ್ದು, 300 ಖೈದಿಗಳನ್ನು ಬಂಧ ಮುಕ್ತಗೊಳಿಸಿದ್ದಾರೆ.

ಉಗ್ರರು ದಾಳಿ ಮಾಡುತ್ತಿದ್ದಂತೆ ಜೈಲು ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ಆದರೆ 100ಕ್ಕೂ ಹೆಚ್ಚು ಉಗ್ರರು ದಾಳಿ ಮಾಡಿದ್ದರಿಂದ ಅನೇಕ ಖೈದಿಗಳು ತಪ್ಪಿಸಿಕೊಂಡಿದ್ದು, ಅಧಿಕಾರಿಗಳು ಸೇರಿದಂತೆ ಕೆಲ ಖೈದಿಗಳು ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಪಾಕಿಸ್ತಾನದ ಕೇಂದ್ರ ಜೈಲಿನಲ್ಲಿ 5,000 ಖೈದಿಗಳಿದ್ದರು. ಅದರಲ್ಲಿ 250 ಖೈದಿಗಳು ತಾಲಿಬಾನ್ ಉಗ್ರರರು ಎಂದು ಮೂಲಗಳು ತಿಳಿಸಿವೆ.

ತಾಲಿಬಾನ್ ಸಂಘಟನೆ ದಾಳಿ ಮಾಡಿರುವುದನ್ನು ರಾಜರೋಷವಾಗಿ ಒಪ್ಪಿಕೊಂಡಿದೆ. ಜೈಲಿನ ಮೇಲೆ ದಾಳಿ ಮಾಡಿ 300 ಖೈದಿಗಳನ್ನು ಜೈಲಿನಿಂದ ಮುಕ್ತಗೊಳಿಸಿದ್ದೇವೆ ಎಂದು ತಾಲಿಬಾನ್ ವಕ್ತಾರ ಶಹಿದುಲ್ಲಾ ಶಹಿದ್ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪಟ್ಟಣದ ನಾಗರಿಕ ಆಯುಕ್ತರು ಮಾತನಾಡಿ, ಘಟನೆಯಲ್ಲಿ ಜೈಲು ಅಧಿಕಾರಿಗಳು ಸೇರಿದಂತೆ ಅನೇಕ ಖೈದಿಗಳು ಮೃತಪಟ್ಟಿದ್ದಾರೆ. ಜೈಲು ಅಧಿಕಾರಿಗಳು ತಾಲಿಬಾನ್ ಉಗ್ರರನ್ನು ತಡೆಯಲೆತ್ನಿಸದರು. ಆದರೆ ಸೂಸೈಡ್ ಬಾಂಬರ್ ಅವರ ಮೇಲೆ ದಾಳಿ ಮಾಡಿದ ಪರಿಣಾಮ ಈ ಅನಾಹುತಕ್ಕೆ ಕಾರಣವಾಗಿದೆ. ಇದಲ್ಲದೇ ತಾಲಿಬಾನ್ ಖೈದಿಗಳು ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.