ಅಗ್ನಿ ಅವಘಡ: ಕಟ್ಟಡದ ಅರ್ಧಭಾಗ ಕುಸಿತ
ಬಳ್ಳಾರಿ: ಬಳ್ಳಾರಿಯ ಮೆಣಸಿನಕಾಯಿ ದಾಸ್ತಾನಿನಲ್ಲಿ ಉಂಟಾಗಿದ್ದ ಅಗ್ನಿ ಆಕಸ್ಮಿಕದಿಂದಾಗಿ ಸೋಮವಾರ ಕಟ್ಟದ ಅರ್ಧಭಾಗ ಕುಸಿದು ಬಿದ್ದಿದೆ.
ಬಳ್ಳಾರಿಯಲ್ಲಿರುವ ಶ್ರೀ ಬಾಲಾಜಿ ಕೋಲ್ಟ್ ಸ್ಟೋರೇಜ್ ಗೋಡೌನ್ ನಲ್ಲಿ ನಿನ್ನೆ ಸಂಭವಿಸಿದ್ದ ಅಗ್ನಿ ಆಕಸ್ಮಿಕ ಇಂದು ಕೂಡ ನಿಯಂತ್ರಣಕ್ಕೆ ಬರಲಿಲ್ಲ. ಅಗ್ನಿ ಶಾಮಕ ದಳಗಳ ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದ್ದು, ಅಗ್ನಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿಯ ತೀವ್ರತೆಯಿಂದಾಗಿ ಕಟ್ಟಡದ ಅರ್ಧಭಾಗ ಸಂಪೂರ್ಣ ಹಾಳಾಗಿ ಕುಸಿದುಬಿದ್ದಿದೆ. ಹುಬ್ಬಳ್ಳಿಯಿಂದ ತರಿಸಲಾಗಿದ್ದ ಕ್ರೇನ್ನ ಸಹಾಯ ಪಡೆದಿರುವ ಅಗ್ನಿ ಶಾಮಕ ಸಿಬ್ಬಂದಿ ಇಂದು ಹರಸಾಹಸ ಪಟ್ಟು ಬೆಂಕಿ ನಂದಿಸುತ್ತಿದ್ದಾರೆ. ಆದರೆ ದಸ್ತಾನಿನಲ್ಲಿ ಸಂಗ್ರಹಿಸಡಲಾಗಿರುವ ಮೆಣಸಿನಕಾಯಿ ಬೆಂಕಿಯಲ್ಲಿ ಬೇಯುತ್ತಿದ್ದು, ಅದರ ಘಾಟು ಗಾಳಿಯಲ್ಲಿ ಹರಡುತ್ತಿದೆ. ಇದು ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಗೆ ತೀವ್ರ ತೊಡಕಾಗಿದೆ.
ಬೆಂಕಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಅಗ್ನಿ ಅವಘಡದಲ್ಲಿ ಸಾವಿರಾರು ಟನ್ ಮೆಣಸಿನಕಾಯಿ ನಾಶವಾಗಿದ್ದು, ಮೆಣಸಿನ ಕಾಯಿ ಇಟ್ಟಿದ್ದ ರೈತರು ಇದೀಗ ಕಂಗಾಲಾಗಿದ್ದಾರೆ. ಕಟ್ಟದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳನ್ನು ಮತ್ತು ನೂರಾರು ಚೀಲ ಕಡಲೆ ಕಾಯಿಯನ್ನು ಕೂಡ ಶೇಖರಣೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆದರೆ ರೈತರಿಗಾದ ನಷ್ಟವನ್ನು ತುಂಬುವರಾರು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿ ಮೂಡಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಳ್ಳಾರಿ ಎಪಿಎಂಸಿ ಅಧಿಕಾರಿಗಳು ಕೋಲ್ಡ್ ಸ್ಟೋರೇಜ್ಗೆ ಇನ್ಶೂರೆನ್ಸ್ ಇದ್ದು, ರೈತರ ನಷ್ಟವನ್ನು ಮಾಲೀಕರು ಭರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕಷ್ಟಪಟ್ಟು ಬೆಳೆದ ತಮ್ಮ ಬೆಳೆ ಹಾಳಾಗಬಾರದು. ಒಳ್ಳೆಯ ಬೆಲೆ ಸಿಕ್ಕಾಗ ಮಾರಬೇಕು ಎಂದು ಕೋಲ್ಡ್ ಸ್ಟೋರೇಜ್ನಲ್ಲಿಟ್ಟಿದ್ದ ರೈತರು ಇದೀಗ ಕಂಗಾಲಾಗಿದ್ದಾರೆ.
ಕೋಲ್ಡ್ ಸ್ಟೋರೇಜ್ನ ಇನ್ಶೂರೆನ್ಸ್ ಹಣ ಮಾಲೀಕರ ಕೈಗೆ ಬರುವುದು ಹಲವು ದಿನಗಳ ನಂತರ. ಅಲ್ಲಿಯವರೆಗೂ ರೈತರ ಪಾಡು ಕೇಳವರಾರು ಎನ್ನುವುದೇ ಇದೀಗ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

