ಚೀನಾದಲ್ಲಿ ಭಾರಿ ಅಗ್ನಿ ದುರಂತ: 112 ಸಾವು

ಬೀಜಿಂಗ್: ನೆರೆಯ ಚೀನಾ ದೇಶದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದ್ದು, 112 ಮಂದಿ ದಾರುಣವಾಗಿ ಸಾವನ್ನಪ್ಪಿ 54ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಚೀನಾದ ಡಿಹ್ಯು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕಸಾಯಿಖಾನೆಯಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಘಟನೆಯಲ್ಲಿ ಕಾರ್ಮಿಕರು ಸೇರಿದಂತೆ ಸುಮಾರು 112 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಸುಮಾರು 54 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಂದು ಬೆಳಗ್ಗೆ ಸುಮಾರು 6 ಗಂಟೆಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ಸಮಯ ಕಳೆಯುತ್ತಿದ್ದಂತೆ ಇಡೀ ಕಟ್ಟಡವನ್ನು ಆವರಿಸಿತು. ಬೆಂಕಿಯನ್ನು ನಂದಿಸಲು ಸ್ಥಳೀಯರು ಪ್ರಯತ್ನಿಸಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡ ಆವರಿಸುತ್ತಿದ್ದಂತೆ ಕಟ್ಟಡದ ಒಳಗಿದ್ದ ಕಾರ್ಮಿಕರು ಹೊರಬರಲಾಗದೇ ಅಲ್ಲಿಯೇ ಬಂಧಿಗಳಾದರು. ಹೀಗಾಗಿಯೇ ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವೆಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಕ್ರೇನ್ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಕಟ್ಟದಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಇಂದು ಬೆಳಗ್ಗೆ 6 ಗಂಟೆಯಲ್ಲಿ ಕೆಲಸಕ್ಕಾಗಿ ಪೌಲ್ಟ್ರಿಗೆ ತೆರಳಿದಾಗ ದೊಡ್ಡ ಸ್ಫೋಟದ ಶಬ್ದ ಕೇಳಿಬಂತು. ಇದ್ದಕ್ಕಿದ್ದಂತೆಯೇ ಕಟ್ಟದಲ್ಲೆಲ್ಲಾ ಕಪ್ಪು ಹೊಗೆ ಆವರಿಸಿತು. ಕಟ್ಟಡದಲ್ಲಿ ಹಲವಾರು ಮಂದಿ ಕೂಗಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಕಟ್ಟಡಕ್ಕೆ ಕೇವಲ ಒಂದೇ ಒಂದು ಪ್ರವೇಶದ್ವಾರವಿದ್ದು, ಅದರಿಂದಲೇ ಕಾರ್ಮಿಕ ಪ್ರವೇಶ ಮತ್ತು ನಿರ್ಗಮನವಾಗುತ್ತಿತ್ತು. ಅಗ್ನಿ ಆಕಸ್ಮಿಕ ವೇಳೆ ಆ ಪ್ರವೇಶ ದ್ವಾರ ಕೂಡ ಮುಚ್ಚಿಕೊಂಡಿತ್ತು ಎಂದು ಕಾರ್ಮಿಕರೊಬ್ಬರು ತಿಳಿಸಿದ್ದಾರೆ.
ಈ ಕಸಾಯಿಖಾನೆಯಲ್ಲಿ ಸುಮಾರು 1,200 ಮಂದಿ ಕಾರ್ಮಿಕರಿದ್ದು, ಚೀನಾದ ಅತಿ ಹೆಚ್ಚು ಮಾಂಸೋತ್ಪಾದನೆ ಮಾಡುವ ಕಸಾಯಿಖಾನೆಗಳಲ್ಲಿ ಇದೂ ಕೂಡ ಒಂದಾಗಿದೆ. 2009ರಲ್ಲಿ ಆರಂಭಗೊಂಡ ಈ ಕಸಾಯಿಖಾನೆ ಪ್ರತಿ ವರ್ಷ ಸುಮಾರು 67 ಸಾವಿರ ಟನ್ ಮಾಂಸವನ್ನು ಉತ್ಪಾದನೆ ಮಾಡಿ ರಫ್ತು ಮಾಡುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


