ಈಗಿನ ಸುದ್ದಿ

ಶಿಲ್ಪಾ ಶೆಟ್ಟಿಗೂ ಸುತ್ತಿಕೊಂಡ ಬೆಟ್ಟಿಂಗ್ ಉರುಳು

ಶಿಲ್ಪಾ ಶೆಟ್ಟಿಗೂ ಸುತ್ತಿಕೊಂಡ ಬೆಟ್ಟಿಂಗ್ ಉರುಳು
Published On :

ನವದೆಹಲಿ: ಬಾಲಿವುಡ್ ನಟಿ ಮತ್ತು ರಾಜಸ್ತಾನ ರಾಯಲ್ಸ್ ತಂಡದ ಸಹ ಒಡತಿ ಶಿಲ್ಪಾ ಶೆಟ್ಟಿ ಅವರ ಕೊರಳಿಗೂ ಬೆಟ್ಟಿಂಗ್ ಉರುಳು ಸುತ್ತಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ ಮತ್ತು ನಟಿ ಶಿಲ್ಪಾಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ನಿನ್ನೆ ವಿಚಾರಣೆಗೊಳಪಡಿಸಿದ್ದ ದೆಹಲಿ ವಿಶೇಷ ಪೊಲೀಸರು, ಅವರಿಂದ ಬೆಟ್ಟಿಂಗ್ ನಡೆಸಿರುವ ಕುರಿತು ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಂಡಿದ್ದರು. ಆದರೆ ಈಗ ಅವರ ಪತ್ನಿ ಶಿಲ್ಪಾ ಶೆಟ್ಟಿ ಅವರನ್ನು ಕೂಡ ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ನಿನ್ನೆ ರಾಜ್‌ಕುಂದ್ರಾ ಅವರ ವ್ಯವಹಾರಿಕ ಪಾಲುದಾರ ಎಂದು ಹೇಳಲಾಗುತ್ತಿರುವ ಉಮೇಶ್ ಗೋಯೆಂಕಾ ಎಂಬಾತ ರಾಜ್ ಕುಂದ್ರಾ ಬೆಟ್ಟಿಂಗ್ ನಡೆಸಿದ್ದನ್ನು ಬಹಿರಂಗಗೊಳಿಸಿದ್ದನು. ಆದರೆ ಇಂದು ಇದೇ ಉಮೇಶ್‌ಗೊಯೆಂಕಾ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿ ನಟಿ ಶಿಲ್ಪಾ ಶೆಟ್ಟಿ ಕೂಡ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಅಂಶವನ್ನು ಹೊರಹಾಕಿದ್ದಾನೆ. ಐಪಿಎಲ್ 6ನೇ ಆವೃತ್ತಿಯ ಲೀಗ್ ಹಂತದ ಆರ್‌ಆರ್ ಮತ್ತು ಕೆಕೆಆರ್ ತಂಡಗಳ ನಡುವಿನ ಪಂದ್ಯದಲ್ಲಿ ಶಿಲ್ಪಾ ಶೆಟ್ಟಿ ಬೆಟ್ಟಿಂಗ್ ನಡೆಸಿದ್ದರು ಎಂದು ಉಮೇಶ್ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆದರೆ ಉಮೇಶ್ ಗೋಯೆಂಕಾ ಹೇಳಿಕೆಯನ್ನು ತಿರಸ್ಕರಿಸಿರುವ ಶಿಲ್ಪಾ ಶೆಟ್ಟಿ, ಉಮೇಶ್ ಗೋಯೆಂಕಾ ಅವರು ಸುಳ್ಳುಹೇಳುತ್ತಿದ್ದು, ತಾವು ಮತ್ತು ತಮ್ಮ ಪತಿ ಯಾವುದೇ ರೀತಿಯ ಬೆಟ್ಟಿಂಗ್ ನಡೆಸಿಲ್ಲ. ಮಾಧ್ಯಮಗಳು ಬೇಕೆಂದೇ ಈ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ಆರೋಪಿಸಿದ್ದಾರೆ. ಮೂಲಗಳ ಪ್ರಕಾರ ಐಪಿಎಲ್ 6ನೇ ಆವೃತ್ತಿಯ ಲೀಗ್ ಹಂತದ ಪಂದ್ಯವೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ಉಮೇಶ್ ಗೋಯೆಂಕಾ ಅವರ ಮೂಲಕ ಬೆಟ್ಟಿಂಗ್ ನಡೆಸಿದ್ದರು ಎಂದು ತಿಳಿದು ಬಂದಿದೆ.

ಇದೀಗ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ರಾಜ್ ಕುಂದ್ರಾ ಅವರ ಪಾಸ್‌ಪೋರ್ಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಅವರನ್ನು ಕೂಡ ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.