ಡ್ರೋನ್ ದಾಳಿ: ಅಮೆರಿಕ ರಾಯಭಾರಿಗೆ ಸಮನ್ಸ್

ಇಸ್ಲಾಮಾಬಾದ್: ಅನವಶ್ಯಕವಾಗಿ ಅಮೆರಿಕ ಸೇನಾ ಪಡೆಗಳು ಡ್ರೋನ್ ದಾಳಿ ನಡೆಸುತ್ತಿವೆ ಎಂದು ಆರೋಪಿಸಿ ಪಾಕಿಸ್ತಾನ ಸರ್ಕಾರ ಅಮೆರಿಕ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.
ಇತ್ತೀಚೆಗಷ್ಟೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ನವಾಜ್ ಷರೀಫ್ ಸರ್ಕಾರ, ಪಾಕ್ ನೆಲದಲ್ಲಿ ಡ್ರೋನ್ ದಾಳಿಯನ್ನು ಖಂಡಿಸಿ ಅಮೆರಿಕ ರಾಯಭಾರಿಗೆ ವಿವರಣೆ ಕೋರಿ ಸಮನ್ಸ್ ಜಾರಿ ಮಾಡಿದೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಗಡಿಯಲ್ಲಿ ಅಮೆರಿಕದ ಚಾಲಕ ರಹಿತ ಯುದ್ಧ ವಿಮಾನ ಡ್ರೋನ್ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ 7 ಸೈನಿಕರು ಹತರಾಗಿದ್ದರು. ಕಳೆದ ಶುಕ್ರವಾರ ಕೂಡ ಪಾಕ್ ಗಡಿಯಲ್ಲಿ ಡ್ರೋನ್ ವಿಮಾನಗಳು ಹಾರಾಡಿರುವ ಕುರಿತು ಪಾಕ್ ಸೈನಿಕರು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.
ಇದರಿಂದ ಅಮೆರಿಕದ ವಿರುದ್ಧ ತನ್ನ ಅಸಮಾಧಾನವನ್ನು ಹೊರಹಾಕಿರುವ ಪಾಕ್ ಸರ್ಕಾರ ಅಮೆರಿಕ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೆ ಈ ಹಿಂದೆಯೂ ಕೂಡ ಡ್ರೋನ್ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಕ್ ಸರ್ಕಾರ, ಅಮೆರಿಕ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿತ್ತು. ಅಮೆರಿಕದ ಡ್ರೋನ್ ದಾಳಿ ವಿರುದ್ಧ ಪಾಕ್ ಸಂಸತ್ತು ಕೂಡ ಖಂಡನಾ ನಿರ್ಣಯ ಮಂಡಿಸಿತ್ತು.
ಪಾಕಿಸ್ತಾನದ ನೂತನ ಪ್ರಧಾನಿ ನವಾಜ್ ಷರೀಫ್ ಅವರು ಅಮೆರಿಕದ ಡ್ರೋನ್ ದಾಳಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹಿಂದೆ ಪ್ರತಿಪಕ್ಷ ಸ್ಥಾನದಲ್ಲಿದ್ದ ನವಾಜ್ ಷರೀಫ್ ಅವರು, ಈ ಹಿಂದಿನ ಸರ್ಕಾರ ಅಮೆರಿಕದ ಡ್ರೋನ್ ದಾಳಿಯನ್ನು ಲಘುವಾಗಿ ಪರಿಗಣಿಸಿದೆ ಎಂದು ಟೀಕಿಸಿದ್ದರು. ಆದರೆ ಇದೀಗ ಸ್ವತಃ ಅಧಿಕಾರಕ್ಕೆ ಬಂದಿರುವ ಅವರು, ಅಮೆರಿಕದ ವಿರುದ್ಧ ತಮ್ಮ ಅಸಮಾಧಾನವನ್ನು ರಾಯಭಾರಿಗೆ ಸಮನ್ಸ್ ಜಾರಿ ಮಾಡುವ ಮೂಲಕ ಹೊರಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


