ಈಗಿನ ಸುದ್ದಿ

'ದಕ್ಷಿಣ'ದವನಾದ್ದರಿಂದ ಪಿತೂರಿ ನಡೆಸಲಾಗುತ್ತಿದೆ: ಶ್ರೀನಿವಾಸನ್

'ದಕ್ಷಿಣ'ದವನಾದ್ದರಿಂದ ಪಿತೂರಿ ನಡೆಸಲಾಗುತ್ತಿದೆ: ಶ್ರೀನಿವಾಸನ್
Published On :

ನವದೆಹಲಿ: ನಾನು ದಕ್ಷಿಣ ಭಾರತೀಯನಾದ್ದರಿಂದ ನನ್ನ ವಿರುದ್ಧ ಬಿಸಿಸಿಐನಲ್ಲಿ ಪಿತೂರಿ ನಡೆಸಲಾಗುತ್ತಿದೆ ಎಂದು ಬಿಸಿಸಿಐನ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, 'ಬಿಸಿಸಿಐನಲ್ಲಿ ದಕ್ಷಿಣ ಭಾರತೀಯರ ವಿರುದ್ಧ ಉತ್ತರ ಭಾರತೀಯರು ಲಾಭಿ ನಡೆಸುತ್ತಿದ್ದಾರೆ' ಎಂಬ ಜನತಾ ಪಾರ್ಟಿಯ ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 'ಇದು ಬಹಿರಂಗ ಸತ್ಯವಾಗಿದ್ದು, ಬಿಸಿಸಿಐನಲ್ಲಿ ಹಲವು ವರ್ಷಗಳಿಂದ 'ದಕ್ಷಿಣ ಭಾರತ ವಿರೋಧಿ ಧೋರಣೆ' ಬೆಳೆದುಕೊಂಡು ಬಂದಿದೆ. ಹೀಗಾಗಿಯೇ ನನ್ನ ವಿರುದ್ಧ ಅನವಶ್ಯಕ ಪಿತೂರಿ ನಡೆಯುತ್ತಿದೆ. ನನ್ನ ಸೋದರಳಿಯ ಪ್ರಕರಣದಲ್ಲಿ ಸಿಲುಕಿರಬಹುದು. ಆದರೆ ಅದು ಸಾಬೀತಾಗಿಲ್ಲ' ಎಂದು ಅವರು ಹೇಳಿದ್ದಾರೆ.

'ಗುರುನಾಥ್ ಮೇಯಪ್ಪನ್ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದ್ದು, ಆತ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗುವ ವಿಶ್ವಾಸವಿದೆ' ಎಂದು ಶ್ರೀನಿವಾಸನ್ ಹೇಳಿದರು.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀನಿವಾಸನ್ ಸೋದರಳಿಯ ಗುರುನಾಥನ್ ಮೇಯಪ್ಪನ್ ಅವರ ಪಾತ್ರದ ಕುರಿತು ದೆಹಲಿ ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಂತೆಯೇ ಬಿಸಿಸಿಐ ಅಧ್ಯಕ್ಷರಾದ ಶ್ರೀನಿವಾಸನ್ ರಾಜಿನಾಮೆಗೆ ಬಲವಾದ ಕೂಗು ಕೇಳಿಬಂದಿತ್ತು. ದೂರವಾಣಿ ಸಂಭಾಷಣೆಯ ದಾಖಲೆಯಲ್ಲಿ ಸ್ವತಃ ಗುರುನಾಥನ್ ಅವರೇ ತಮ್ಮ ವಿರುದ್ಧ ಐಸಿಸಿ ಎಚ್ಚರಿಕೆ ನೀಡಿರುವುದನ್ನು ಸಹ ಆರೋಪಿ ಮತ್ತು ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಅವರೊಂದಿಗೆ ಒಪ್ಪಿಕೊಂಡಿದ್ದರು. ಇಷ್ಟೆಲ್ಲಾ ನಡೆದರೂ ಶ್ರೀನಿವಾಸನ್ ತಮ್ಮ ಅಳಿಯನ ಪರವಾಗಿ ನಿಂತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.