ಈಗಿನ ಸುದ್ದಿ

ವಿಪ್ ಉಲ್ಲಂಘನೆ: 15 ಆಂಧ್ರ ಶಾಸಕರ ಸದಸ್ಯತ್ವ ರದ್ದು

Published On :

ಹೈದರಾಬಾದ್: ವಿಶ್ವಾಸ ಮತಯಾಚನೆ ವೇಳೆ ಪಕ್ಷಗಳ ವಿಪ್ ಉಲ್ಲಂಘಿಸಿದ್ದ ಆರೋಪದ ಮೇಲೆ 15 ಶಾಸಕರ ಶಾಸಕತ್ವವನ್ನು ಸ್ಪೀಕರ್ ಎನ್.ಮನೋಹರ್ ಅವರು ರದ್ದುಗೊಳಿಸಿದ್ದಾರೆ.

ಆಂಧ್ರ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರರೆಡ್ಡಿ ಅವರ ಮರಣಾನಂತರ ನಡೆದ ಅನಿರೀಕ್ಷಿತ ಬೆಳವಣಿಗಳಿಂದಾಗಿ ಕಾಂಗ್ರೆಸ್ ಇಬ್ಭಾಗವಾಗಿತ್ತು. ಈ ಬೆಳವಣಿಗೆಯಲ್ಲಿ ರಾಜಶೇಖರ ರೆಡ್ಡಿ ಅವರ ಪುತ್ರ ಮತ್ತು ಸಂಸದ ವೈಎಸ್ ಜಗನ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಅಲ್ಪ ಮತಕ್ಕೆ ಕುಸಿದಿದ್ದ ಆಂಧ್ರ ಕಾಂಗ್ರೆಸ್ ಸದನದಲ್ಲಿ ವಿಶ್ವಾಸ ಮತಯಾಚಿಸಿತ್ತು.

ಈ ವೇಳೆ ಪಕ್ಷದ ವಿಪ್ ಉಲ್ಲಂಘಿಸಿದ್ದ ಶಾಸಕರು, ಪಕ್ಷದ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದರು. ವಿಪ್ ಉಲ್ಲಂಘನೆ ಪ್ರಕರಣವನ್ನು ಸತತ 2 ತಿಂಗಳಗಳ ಕಾಲ ವಿಚಾರಣೆ ನಡೆಸಿದ ಸ್ಪೀಕರ್ ಅವರು, ಇಂದು ವಿಪ್ ಉಲ್ಲಂಘನೆ ಮಾಡಿದ 17 ಶಾಸಕರ ಪೈಕಿ 15 ಶಾಸಕರ ಶಾಸಕತ್ವವನ್ನು ರದ್ದುಗೊಳಿಸಿದ್ದಾರೆ. ಮತ್ತಿಬ್ಬರು ಶಾಸಕರ ವಿಚಾರಣೆಯನ್ನು ಮುಂದೂಡಲಾಗಿದೆ. ಸ್ಪೀಕರ್ ಅವರು ಶಾಸಕತ್ವ ರದ್ದುಗೊಳಿಸಿರುವ 15 ಶಾಸಕರ ಪೈಕಿ 9 ಮಂದಿ ಕಾಂಗ್ರೆಸ್ ಪಕ್ಷದವರಾಗಿದ್ದು, 6 ಶಾಸಕರು ತೆಲುಗು ದೇಶಂ(ಟಿಡಿಪಿ) ಪಕ್ಷಕ್ಕೆ ಸೇರಿದವರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.