ಸ್ಪಾಟ್ ಫಿಕ್ಸಿಂಗ್: ವಿಕ್ರಮ ಅಗರ್ವಾಲ್ಗೆ ಸಮನ್ಸ್
ಚೆನ್ನೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಉದ್ಯಮಿ ವಿಕ್ರಮ್ ಅಗರ್ವಾಲ್ ಅವರಿಗೆ ತಮಿಳುನಾಡು ಸಿಐಡಿ ಅಧಿಕಾರಿಗಳು ಮತ್ತೊಂದು ಸಮನ್ಸ್ ಜಾರಿ ಮಾಡಿದ್ದಾರೆ.
ಕಳೆದ ವಾರವಷ್ಟೇ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಸಮನ್ಸ್ ಪಡೆದಿದ್ದ ವಿಕ್ರಮ ಅಗರ್ವಾಲ್ ಅವರಿಗೆ ತಮಿಳುನಾಡು ಸಿಐಡಿ ಅಧಿಕಾರಿಗಳು ಮತ್ತೊಂದು ಸಮನ್ಸ್ ಜಾರಿ ಮಾಡಿದ್ದಾರೆ. ತಮ್ಮ ಮಾಲೀಕತ್ವದ ಹೋಟೆಲ್ಗೆ ಬುಕ್ಕಿಗಳನ್ನು ಕರೆಸಿಕೊಂಡು ಪಂದ್ಯವನ್ನು ಫಿಕ್ಸ್ ಮಾಡಲು ಅನುವು ಮಾಡಿಕೊಟ್ಟಿದ್ದಾರೆಂಬ ಆರೋಪಕ್ಕೆ ವಿವರಣೆ ನೀಡಬೇಕು ಎಂದು ವಿಕ್ರಮ ಅಗರ್ವಾಲ್ಗೆ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
ಬುಕ್ಕಿಗಳೊಂದಿಗೆ ಅಗರ್ವಾಲ್ ಅವರ ಹೊಂದಿರುವ ಸಂಬಂಧದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಕಳೆದ ವಾರವಷ್ಟೇ ಅವರ ಚೆನ್ನೈ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ ಕೆಲವು ಮಹತ್ವದ ದಾಖಲೆಗಳನ್ನು ಕೂಡ ವಶಪಡಿಸಿಕೊಂಡಿದ್ದರು. ಮೇ 31ರಂದು ಮುಂಬೈ ಪೊಲೀಸರು ವಿಕ್ರಮ ಅಗರ್ವಾಲ್ ಅವರಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಅಲ್ಲದೆ ಚೆನ್ನೈ ತಂಡದ ಸಿಇಒ ಆಗಿದ್ದ ಗುರುನಾಥ್ ಮೇಯಪ್ಪನ್ ಅವರು ವಿಕ್ರಮ್ ಅಗರ್ವಾಲ್ ಅವರ ಸ್ನೇಹಿತರಾಗಿರುವುದು, ಅವರ ವಿರುದ್ಧ ಆರೋಪಗಳಿಗೆ ಮತ್ತಷ್ಟು ಬಲ ನೀಡಿದ್ದವು.
ಒಟ್ಟಾರೆ ಪ್ರಸ್ತುತ ದೆಹಲಿ ವಿಶೇಷ ಪೊಲೀಸರಿಂದ ವಿಚಾರಣೆ ಎದುರಿಸುತ್ತಿರುವ ವಿಕ್ರಮ ಅಗರ್ವಾಲ್ ಅವರು, ಸೋಮವಾರ ಮತ್ತೆ ತಮಿಳುನಾಡು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

