ಈಗಿನ ಸುದ್ದಿ

ಪ.ಬಂಗಾಳ: ಮರುಕಳಿಸಿದ ಹಸುಗೂಸುಗಳ ಸಾವಿನ ಸರಣಿ

ಪ.ಬಂಗಾಳ: ಮರುಕಳಿಸಿದ ಹಸುಗೂಸುಗಳ ಸಾವಿನ ಸರಣಿ
Published On :

ಕೋಲ್ಕತಾ: ಪಶ್ಚಿಮ ಬಂಗಾಳದಳದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತೆ ಹಸುಗೂಸುಗಳ ಸಾವಿನ ಸರಣಿ ಶುರುವಾಗಿದ್ದು, ಕಳೆದು ಮೂರು ದಿನಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿವೆ.

11 ತಿಂಗಳೊಳಗಿನ ಸುಮಾರು 15 ಮಕ್ಕಳು ಪುರಾಲಿಯಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಸುನೀಗಿವೆ. ಹಲವು ದಿನಗಳ ಹಿಂದೆ ಸುಮಾರು 35ಕ್ಕೂ ಅಧಿಕ ಮಕ್ಕಳನ್ನು ವಿವಿಧ ಕಾರಣಗಳಿಂದಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕಳೆದ ಶುಕ್ರವಾರದಿಂದ ಮಕ್ಕಳ ಸಾವಿನ ಸರಣಿ ಶುರುವಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಾದರ್ ಡೆಬೆನ್ ಮಹತೋ ಸರ್ಕಾರಿ ಆಸ್ಪತ್ರೆಯ ಅಧೀಕ್ಷರಾದ ನೀಲಾಂಜನಾ ಸೇನ್ ಅವರು, ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವಾಗ ಅವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಕೃತಕ ಆಮ್ಲಜನಕವನ್ನು ಅಳವಡಿಸಿ ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲದೆ ಇಲ್ಲಿಗೆ ದಾಖಲಿಸಲಾಗಿರುವ ಬಹುತೇಕ ಮಕ್ಕಳು ಅಪೌಷ್ಟಿಕತೆ, ನಿರ್ಜಲೀಕರಣ ಮತ್ತು ಮಿದುಳು ಸಂಬಂಧಿ ರೋಗಗಳಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

'ಮಕ್ಕಳನ್ನು ದಾಖಲಿಸಿಕೊಳ್ಳುವಾಗ ನಾವು ತಾಯಂದಿರನ್ನು ಕೂಡ ಪರೀಕ್ಷೆ ನಡೆಸಿದೆವು. ಅವರಲ್ಲಿಯೂ ಕೂಡ ಹಲವು ಸಮಸ್ಯೆಗಳು ಕಂಡುಬಂದಿದ್ದು ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಲು ಇದೂ ಕೂಡ ಕಾರಣ. ಅಲ್ಲದೆ ಆಸ್ಪತ್ರೆಯಲ್ಲಿ ಮತ್ತೆ 10-20 ಮಕ್ಕಳು ಗಂಭೀರವಾಗಿದ್ದು, ನಮ್ಮಲ್ಲಿ 10 ತುರ್ತು ಚಿಕಿತ್ಸಾ ಬೆಡ್ಗಳು ಮಾತ್ರ ಇವೆ' ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈ ಹಿಂದೆಯೂ ಕೂಡ ಮಕ್ಕಳ ಸರಣಿ ಸಾವು ಸಂಭವಿಸಿತ್ತು. ಆಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದರು. ಆದರೆ ಇದೀಗ ಮತ್ತೆ ಸಾಲು ಸಾಲಾಗಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.