ಅಪಾಯದಲ್ಲಿ ವಿದೇಶಿ ಹಡಗು: 22 ಸಿಬ್ಬಂದಿಗಳ ರಕ್ಷಣೆ

ಕೊಚ್ಚಿ: ಅರಬ್ಬಿ ಸಮುದ್ರದಲ್ಲಿ ವಿದೇಶಿ ಸರಕು ಸಾಗಣೆ ಹಡಗೊಂದು ಅಪಾಯಕ್ಕೆ ಸಿಲುಕಿದ್ದು, ಕರಾವಳಿ ರಕ್ಷಣಾ ಪಡೆಗಳ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ 22 ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ.
ಕೇರಳದ ಕೊಚ್ಚಿ ಬಂದರಿನಿಂದ ಸುಮಾರು ನಾಲ್ಕು ನಾಟಿಕಲ್ ಮೈಲು ದೂರದಲ್ಲಿ ಮಾಲ್ಡಿವ್ಸ್ಗೆ ಸೇರಿದ ಎಂಬಿ ಏಷ್ಯನ್ ಎಕ್ಸ್ಪ್ರೆಸ್ ಸರಕು ಸಾಗಣೆ ಹಡಗು, ಭಾರಿ ಗಾಳಿ ಮತ್ತು ಅತಿಯಾದ ಅಲೆಗಳ ಏರಿಳಿತದಿಂದಾಗಿ ಮುಳುಗುವ ಭೀತಿಯಲ್ಲಿತ್ತು. ಅದೇ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ರಕ್ಷಣಾ ಪಡೆಯ ವರುಣಾ ಹಡಗಿನ ಸಿಬ್ಬಂದಿಗಳು ಅಪಾಯದಲ್ಲಿದ್ದ ಹಡಗನ್ನು ಗಮನಿಸಿ ಕೂಡಲೇ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಪಡೆಯ ಸಿಬ್ಬಂದಿಗಳು, ಹಡಗಿನಲ್ಲಿದ್ದ ಎಲ್ಲ 22 ಸಿಬ್ಬಂದಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ನಾಲ್ಕು ಮಂದಿ ಭಾರತೀಯರಾಗಿದ್ದು, ಉಳಿದ 18 ಸಿಬ್ಬಂದಿಗಳು ಮಾಲ್ಡಿವ್ಸ್ಗೆ ಸೇರಿದವರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಗಳು ಹಡಗಿನಲ್ಲಿದ್ದವರ ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


