ಈಗಿನ ಸುದ್ದಿ

ಆಯಿಲ್ ಮಾಫಿಯಾದಿಂದ ಮೊಯ್ಲಿಗೆ ಬೆದರಿಕೆ

ಆಯಿಲ್ ಮಾಫಿಯಾದಿಂದ ಮೊಯ್ಲಿಗೆ ಬೆದರಿಕೆ
Published On :

ನವದೆಹಲಿ: ಪೆಟ್ರೋಲಿಯಂ ಮಾಫಿಯಾದಿಂದ ತಮಗೆ ಬೆದರಿಕೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ.

'ತಮಗೆ ಪೆಟ್ರೋಲ್ ಮಾಫಿಯಾದಿಂದ ಬೆದರಿಕೆ ಇದ್ದು, ಪೆಟ್ರೋಲ್ ಆಮದು ಕಾರ್ಯದಲ್ಲಿ ಸಚಿವಾಲಯದ ಕೆಲವರು ಲಾಭಿ ನಡೆಸುತ್ತಿದ್ದಾರೆ' ಎಂಬ ಅಂಶವನ್ನು ಸಚಿವ ವೀರಪ್ಪ ಮೊಯ್ಲಿ ಬಹಿರಂಗಗೊಳಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದ ಅವರು, 'ನಾನು ಪ್ರಜ್ಞಾ ಪೂರ್ವಕವಾಗಿಯೇ ಈ ಮಾತುಗಳನ್ನಾಡುತ್ತಿದ್ದೇನೆ. ನಮ್ಮ ಸಚಿವಾಲಯದಲ್ಲಿಯೇ ಕೆಲವರು ಪೆಟ್ರೋಲಿಯಂ ಆಮದು ಕುರಿತು ಭಾರಿ ಲಾಭಿ ನಡೆಸುತ್ತಿದ್ದಾರೆ. ಅಲ್ಲದೆ ತಮಗೆ ಬಗ್ಗದ ಅಧಿಕಾರಿಗಳು ಮತ್ತು ಸಚಿವರಿಗೆ ಬೆದರಿಕೆ ಹಾಕುವ ಮೂಲಕ ತಮ್ಮ ಕಾರ್ಯಗಳನ್ನು ಸಾಧಿಸುತ್ತಿದ್ದಾರೆ ಎಂದು ಮೊಯ್ಲಿ ಹೇಳಿದರು.

'ಅವರಿಗೆ ಪೆಟ್ರೋಲಿಯಂ ಉತ್ಪನ್ನಗಳ ಆಮದು ನಿಲ್ಲುವುದು ಬೇಡವಾಗಿದೆ. ಹೀಗಾಗಿಯೇ ಈ ಖಾತೆಗೆ ಬರುವ ಎಲ್ಲ ಸಚಿವರುಗಳಿಗೆ ಬೆದರಿಕೆ ಹಾಕುವ ಮೂಲಕ ಮತ್ತು ಇನ್ನಿತರೆ ಮಾರ್ಗಗಳ ಮೂಲಕ ಅವರನ್ನು ತಮ್ಮ ಹಿಡಿತಕ್ಕೆ ಪಡೆಯಲು ಸದಾ ಯತ್ನಿಸುತ್ತಿದ್ದಾರೆ. ಆದರೆ ತಾವು ಇದಾವುದಕ್ಕೂ ಬಗ್ಗುವುದಿಲ್ಲ. ನನ್ನ ಕಾರ್ಯವನ್ನು ನಾನು ಪ್ರಮಾಣಿಕವಾಗಿ ಮಾಡುತ್ತೇನೆ' ಎಂದು ವೀರಪ್ಪಮೊಯ್ಲಿ ತಿಳಿಸಿದರು.

ಬೆದರಿಕೆ ಹಾಕಿದವರ ಅಥವಾ ಮಧ್ಯವರ್ತಿಗಳ ಪರವಾಗಿ ಲಾಭಿ ಮಾಡುತ್ತಿರುವ ಅಧಿಕಾರಿಗಳ ಹೆಸರುಗಳನ್ನು ವಿವರಿಸಲು ನಿರಾಕರಿಸಿದ ಮೊಯ್ಲಿ, ಪೆಟ್ರೋಲಿಯಂ ಖಾತೆಯ ಇತಿಹಾಸವೇ ಅವರು ಯಾರು ಎಂದು ಹೇಳುತ್ತದೆ. ಅಲ್ಲದೆ ನೀವೇ ಆ ಅಧಿಕಾರಿಗಳು ಯಾರು ಎಂದು ಗುರ್ತಿಸಬಹುದು ಎಂದಷ್ಟೇ ಹೇಳಿ ನುಣಿಚಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.