ಈಗಿನ ಸುದ್ದಿ

ನಕಲಿ ಎನ್‌ಕೌಂಟರ್: ಐಪಿಎಸ್ ಆಫೀಸರ್ ಸತೀಶ್ ವರ್ಮಾ ವಜಾ

Published On :

ನವದೆಹಲಿ: 'ಇಶ್ರತ್ ಜಹಾನ್‌' ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರ ಕೇಂದ್ರ ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕ ರಾಜೀಂದರ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಈ ಹಿಂದೆಯೇ ರಾಜೀಂದರ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ಹೆಚ್ಚಿನ ವಿವಿರಗಳಿಗಾಗಿ ಇಂದು ಮತ್ತೆ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಇಶ್ರತ್ ಜಹಾನ್ ಎಂಬ 19 ವರ್ಷದ ಯುವತಿಯನ್ನು ಭಯೋತ್ಪಾದಕಿ ಎಂದು ತಿಳಿದು ಗುಜರಾತ್‌ನ ಅಹಮದಾಬಾದ್ ಹೊರವಲಯದಲ್ಲಿ 2004 ಜೂನ್ 14ರಂದು ಎನ್‌ಕೌಂಟರ್ ಮಾಡಲಾಗಿತ್ತು. ಘಟನೆಯಲ್ಲಿ ಇಶರತ್ ಜಹಾನ್ ಸೇರಿದಂತೆ ಒಟ್ಟು ಐದು ಜನರು ಸಾವಿಗೀಡಾಗಿದ್ದರು.

ಎನ್‌ಕೌಂಟರ್ ಬಳಿಕ ಪೊಲೀಸ್ ಕ್ರಮದ ವಿರುದ್ಧ ಗುಜರಾತ್‌ನಾಧ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೆ ಅಂದು ಎನ್‌ಕೌಂಟರ್ ಮಾಡಿದ ಅಪರಾಧ ವಿಭಾಗದ ಮುಖ್ಯಸ್ಥ ರಾಜೀಂದರ್ ಕುಮಾರ್ ಅವರನ್ನು ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿದೆ. ಇವರ ಸೂಚನೆಯ ಮೇರೆಗೆ ಪೊಲೀಸ್ ಅಧಿಕಾರಿಗಳು ಎನ್‌ಕೌಂಟರ್ ನಡೆಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಹಮದಾಬಾದ್ ನ್ಯಾಯಾಲಯ ಸಿಬಿಐ ವಿರುದ್ಧ ಗರಂ ಆಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಗಣಿಸಿರುವ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮೂಲಗಳು ಪ್ರಕಾರ ಬಿಜೆಪಿ ಪ್ರಮುಖ ನಾಯಕರಾದ ಎಲ್.ಕೆ.ಅಡ್ವಾಣಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಸೇರಿದಂತೆ ಪ್ರಮುಖ ಹಿಂದೂ ಸಂಘಟನೆಯ ನಾಯಕರು ಭಯೋತ್ಪಾದಕರ ಹಿಟ್ ಲಿಸ್ಟ್‌ನಲ್ಲಿದ್ದಾರೆ. ಅಲ್ಲದೆ ಉಗ್ರರು ಈ ನಾಯಕರ ಹತ್ಯೆಗಾಗಿ ಮಹಿಳಾ ಭಯೋತ್ಪಾದಕರನ್ನು ನೇಮಿಸಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಅಪರಾಧ ದಳದ ಸಿಬ್ಬಂದಿಗಳು ಈ ಎನ್‌ಕೌಂಟರ್ ಕಾರ್ಯಾಚರಣೆ ಮಾಡಿದ್ದರು.

ಈ ನಡುವೆ ಎನ್‌ಕೌಂಟರ್‌ನಲ್ಲಿ ಬಲಿಯಾದ ಇಶ್ರತ್ ಜಹಾನ್ ಎಂಬ ಯುವತಿ ಲಷ್ಕರ್ ಸಂಘಟನೆಯ ಮಹಿಳಾ ಆತ್ಮಾಹುತಿ ದಳದ ಸದಸ್ಯೆಯಾಗಿದ್ದಳು ಎಂದು ಅಮೇರಿಕದ ತನಿಖಾ ಸಂಸ್ಥೆ ಎಫ್‌ಬಿಐ ಹೇಳಿತ್ತು.

ಐಪಿಎಸ್ ಆಫೀಸರ್ ಸತೀಶ್ ವರ್ಮಾ ವಜಾ
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಸಂಪೂರ್ಣ ತನಿಖೆಗೆ ಆದೇಶಿಸಿದ್ದು, ಎನ್‌ಕೌಂಟರ್ ಮೇಲುಸ್ತುವಾರಿವಹಿಸಿದ್ದ ಪೊಲೀಸ್ ಅಧಿಕಾರಿ ಸತೀಶ್ ವರ್ಮಾ ಅವರನ್ನು ವಜಾಗೊಳಿಸಿದೆ. ಅಲ್ಲದೆ ತನಿಖೆಯಿಂದ ವರ್ಮಾ ಅವರನ್ನು ಬೇರ್ಪಡಿಸಿ ವಿಚಾರಣೆ ನಡೆಸುವಂತೆ ಸೂಚಿಸಿದೆ. ಅಲ್ಲದೆ ಈ ಪ್ರಕರಣವನ್ನು ಕಾನೂನು ಬಾಹಿರ ಮತ್ತು ನಕಲಿ ಎನ್‌ಕೌಂಟರ್ ದೃಷ್ಟಿಯಲ್ಲಿಯೇ ತನಿಖೆ ನಡೆಸುವಂತೆ ಸಲಹೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.