ಉಕ್ಕುತ್ತಿರುವ ಯಮುನೆ: ದೆಹಲಿಗೂ ಆವರಿಸಿದ ಪ್ರವಾಹ ಭೀತಿ

ನವದೆಹಲಿ: ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೂ ಪ್ರವಾಹ ಭೀತಿ ಆವರಿಸಿದೆ.
ಯಮುನಾ ತಟದಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ನದಿ ಉಕ್ಕಿಹರಿಯುತ್ತಿದ್ದು, ಜಲಾಶಯಗಳಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಯಮುನಾ ನದಿ ಪಾತ್ರದ ಜನತೆಗೆ ಎಚ್ಚರಿಕೆ ರವಾನಿಸಲಾಗಿದೆ. ದೆಹಲಿ ಜನತೆಯಲ್ಲಿ ಪ್ರವಾಹ ಭೀತಿ ಆವರಿಸಿದ್ದು, ನದಿ ಪಾತ್ರದ ಸುಮಾರು 2 ಸಾವಿರ ಜನರನ್ನು ತುರ್ತಾಗಿ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.
ಯಮುನಾ ನದಿ ಉಕ್ಕಿಹರಿಯುತ್ತಿರುವುದರಿಂದ ಪ್ರಮುಖ ರೇಲ್ವೇ ಸಂಪರ್ಕಗಳು ಮುಚ್ಚಿಹೋಗಿದ್ದು, ಸುಮಾರು 145 ವರ್ಷಗಳಷ್ಟು ಹಳೆಯದಾದ ರೇಲ್ವೇ ಮೇಲ್ಸೇತುವೆ ಮುಳುಗಡೆಯಾಗಿದೆ. ಹರ್ಯಾಣದ ಹಥಿನಿಕುಂಡ್ ಜಲಾಶಯದಿಂದ ಸುಮಾರು 8.06 ಲಕ್ಷ ಕ್ಯೂಸೆಕ್ಸ್ ನೀರನ್ನು ಯಮುನಾ ನದಿಗೆ ಹರಿಸಲಾಗಿದ್ದು, ಇದರಿಂದ ಯಮುನಾ ನದಿ ಮತ್ತಷ್ಟು ರಭಸವಾಗಿ ಹರಿಯುತ್ತಿದೆ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಿಎಂ ಸ್ಪೋಲಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರವಾಹ ಭೀತಿ ಎದುರಾಗುತ್ತಿದ್ದಂತೆಯೇ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಿಪತ್ತು ನಿರ್ವಹಣಾ ಸಿಬ್ಬಂಧಿಗಳಿಗೆ ತುರ್ತು ಸಂದೇಶ ರವಾನಿಸಿದೆ. ಅಲ್ಲದೆ ನದಿ ಪಾತ್ರಗಳಲ್ಲಿ ವಿಪತ್ತು ನಿಯಂತ್ರಣ ಕೇಂದ್ರಗಳನ್ನು ತೆರೆದಿದ್ದು, ಎಸ್ಎಂಎಸ್ ಮತ್ತು ದೂರವಾಣಿ ಕರೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಅಲ್ಲದೆ ಸುಮಾರು 62 ಯಾಂತ್ರಿಕ ಬೋಟ್ಗಳನ್ನು ಸನ್ನದ್ಧವಾಗಿರಿಸಿದ್ದು, ಯಾವುದೇ ಪರಿಸ್ಥಿತಿ ನಿರ್ವಹಣೆಗೆ ಸೈನಿಕರು ಸಿದ್ಧರಾಗಿದ್ದಾರೆ ಎಂದು ಸ್ಪೋಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


