ಐಸಿಸಿ ರ್ಯಾಂಕಿಂಗ್: ಮೊದಲ ಸ್ಥಾನ ಉಳಿಸಿಕೊಂಡ ಭಾರತ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಪ್ರಸಕ್ತ ಸಾಲಿನ ಏಕದಿನ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ಕ್ರಿಕೆಟ್ ತಂಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಪ್ರಥಮ ಸ್ಥಾನದಲ್ಲಿ ಮುಂದುವರೆದಿದೆ. ಕಳೆದ ಬಾರಿಯ ರ್ಯಾಂಕಿಂಗ್ನಲ್ಲಿ 119 ಪಾಯಿಂಟ್ಸ್ಗಳನ್ನು ಹೊಂದಿದ್ದ ಭಾರತ, ಇದೀಗ ಮತ್ತೆರಡು ಪಾಯಿಂಟ್ಸ್ಗಳನ್ನು ಹೆಚ್ಚುವರಿಯಾಗಿ ಪಡೆಯುವ ಮೂಲಕ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಒಟ್ಟು 121 ಪಾಯಿಂಟ್ಸ್ಗಳನ್ನು ಭಾರತ ಸಂಗ್ರಹಿಸಿದ್ದು, 113 ಪಾಯಿಂಟ್ಸ್ಗಳನ್ನು ಗಳಿಸಿರುವ ಇಂಗ್ಲೆಂಡ್ ತಂಡ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. ಆದರೆ ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡ 113 ಪಾಯಿಂಟ್ಸ್ಗಳೊಂದಿಗೆ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಆಂತೆಯೇ ಐಸಿಸಿ ಬೌಲರ್ಸ್ಗಳ ರ್ಯಾಂಕಿಂಗ್ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು, ಕಳೆದ ಬಾರಿ 8ನೇ ಸ್ಥಾನದಲ್ಲಿದ್ದ ಭಾರತೀಯ ಬೌಲರ್ ರವೀಂದ್ರ ಜಡೇಜಾ ಅವರು 3 ಸ್ಥಾನಗಳ ಮೇಲೇರಿ, 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅಂತೆಯೇ ಆರ್.ಅಶ್ವಿನ್ ಅವರು 15ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ವಿರಾಟ್ ಕೊಹ್ಲಿ 3ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಸುರೇಶ್ ರೈನಾ ಮತ್ತು ಗೌತಮ್ ಗಂಭೀರ್ ಅವರು ಕ್ರಮವಾಗಿ 14 ಮತ್ತು 19ನೇ ಸ್ಥಾನಕ್ಕೆ ಕುಸಿದಿದ್ದಾರೆ.
ನೂತನವಾಗಿ ಐಸಿಸಿ ಬಿಡುಗಡೆ ಮಾಡಿರುವ ತಂಡಗಳ ಏಕದಿನ ರ್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ.
| ಸ್ಥಾನ | ತಂಡಗಳು | ಪಾಯಿಂಟ್ಸ್ಗಳು |
| 1 | ಭಾರತ | 121 |
| 2 | ಇಂಗ್ಲೆಂಡ್ | 113 |
| 3 | ಆಸ್ಟ್ರೇಲಿಯಾ | 113 |
| 4 | ದ.ಆಫ್ರಿಕಾ | 112 |
| 5 | ಶ್ರೀಲಂಕಾ | 109 |
| 6 | ಪಾಕಿಸ್ತಾನ | 102 |
| 7 | ನ್ಯೂಜಿಲೆಂಡ್ | 88 |
| 8 | ವೆಸ್ಟ್ ಇಂಡೀಸ್ | 88 |
| 9 | ಬಾಂಗ್ಲಾದೇಶ | 75 |
| 10 | ಜಿಂಬಾಂಬ್ವೆ | 55 |
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


