ಈಗಿನ ಸುದ್ದಿ

ಇಟಲಿಯಲ್ಲಿ ಪ್ರಭಲ ಭೂಕಂಪನ

Published On :

ರೋಮ್: ಇಟಲಿ ದೇಶದಲ್ಲಿ ಶುಕ್ರವಾರ ಪ್ರಭಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2ರಷ್ಟು ಕಂಪನದ ತೀವ್ರತೆ ದಾಖಲಾಗಿದೆ.

ಉತ್ತಞ ಇಟಲಿಯ ಮಿಲನ್, ವೆನಿಸ್, ಬೊಲೋಗ್ನ ಮತ್ತು ಫ್ಲಾರೆನ್ಸ್ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಕಚೇರಿ ಮತ್ತು ಮನೆಗಳಲ್ಲಿ ತಂಗಿದ್ದ ಜನ ಭಯಭೀತಗೊಂಡು ಹೊರಗೆ ಓಡಿಬಂದಿದ್ದಾರೆ. ಭೂಕಂಪನದ ಕೇಂದ್ರ ಬಿಂದು ಇಟಲಿಯ ಮಸ್ಸಾ ಪ್ರಾಂತ್ಯದ ಫಿವಿಜಾನೋ ಪ್ರದೇಶ ಎಂದು ತಿಳಿದು ಬಂದಿದೆ. ಸುಮಾರು 6 ಸೆಕೆಂಡುಗಳ ಕಾಲ ಭೂಮಿ ಸತತವಾಗಿ ನಡುಗಿದ್ದು, ಮಸ್ಸಾ ಪ್ರಾಂತ್ಯದ ಕೆಲ ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಭೂಕಂಪನದಿಂದ ಯಾವುದೇ ರೀತಿಯ ಪ್ರಾಣಾಪಾಯಗಳು ಉಂಟಾಗಿಲ್ಲ. ಆದರೆ ಕಟ್ಟಡಗಳ ಹಾನಿ ಕುರಿತು ವರದಿ ತರಿಸಿಕೊಳ್ಳಲಾಗುತ್ತಿದೆ ಎಂದು ಇಟಲಿ ನಾಗರೀಕ ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.