ಸೈಬರ್ ಯುದ್ಧ ದೇಶಕ್ಕೆ ದೊಡ್ಡ ಅಪಾಯ: ಕಲಾಂ
ಹೈದರಾಬಾದ್: ಸೈಬರ್ ಯುದ್ಧ ದೇಶಕ್ಕೆ ಮಾರಕವಾಗಿ ಪರಿಣಮಿಸುತ್ತಿದ್ದು, ಮುಂದೆ ದೊಡ್ಡ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಾಲಂ ಅವರು ಹೇಳಿದ್ದಾರೆ.
ಹೈದರಾಬಾದಿನಲ್ಲಿ ಮಾತನಾಡಿದ ಅಬ್ದುಲ್ ಕಲಾಂ ಅವರು, ಸೈಬರ್ ಯುದ್ಧ ದೇಶಕ್ಕೆ ದೊಡ್ಡ ಅಪಾಯಕಾರಿ ಸಂಗತಿಯಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಕ್ಕೆ ಅತ್ಯಂತ ಸುಭದ್ರ ರಕ್ಷಣೆ ಅತ್ಯಗತ್ಯ ಎಂದು ಹೇಳಿದರು. 'ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಮಾಡಲು ದೇಶದ ಆರ್ಥಿಕತೆ ಮತ್ತು ಮಿಲಿಟರಿ ವ್ಯವಸ್ಥೆಯು ಸಧೃಢಗೊಳ್ಳಬೇಕು. ಆಗ ಮಾತ್ರ ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಸಾಧ್ಯ. ಸೈಬರ್ ಯುದ್ಧವೆನ್ನುವುದು ದೇಶಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ದೇಶದ ಅತಿ ಸೂಕ್ಷ್ಮ ವಿಚಾರಗಳು ಈ ಸೈಬರ್ ಯುದ್ಧದಿಂದಾಗಿ ನಮ್ಮ ಶತ್ರುಗಳಿಗೆ ಬಹಳ ಸುಲಭವಾಗಿ ತಿಳಿಯುತ್ತವೆ'.
'ನಮ್ಮ ಬಹುತೇಕ ರಕ್ಷಣಾ ಮಾಹಿತಿಗಳನ್ನು ಕೂಡ ಸೈಬರ್ ಯುದ್ಧದಿಂದಾಗಿ ಅಪಹರಿಸಬಹುದಾಗಿದೆ. ಹೀಗಾಗಿ ಸೈಬರ್ ಯುದ್ಧವನ್ನು ತಡೆಯುವ ನಿಟ್ಟಿನಲ್ಲಿ ದೇಶಕ್ಕೆ ಸೂಕ್ತವಾದ ಭಧ್ರತೆ ಅಗತ್ಯ. ವಿದ್ಯಾರ್ಥಿಗಳು ಮತ್ತು ಭದ್ರತಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು' ಎಂದು ಕಲಾಂ ಹೇಳಿದರು.
ಪರಮಾಣು ಭದ್ರತೆ ಕುರಿತು ಮಾತನಾಡಿದ ಕಲಾಂ ಅವರು, ದೇಶದ ಎಲ್ಲ ಪರಮಾಣು ಕೇಂದ್ರಗಳು ಸುರಕ್ಷಿತವಾಗಿದ್ದು, ಯಾವುದೇ ಶತ್ರು ರಾಷ್ಟ್ರ ಅಥವಾ ಭಯೋತ್ಪಾದಕ ಸಂಘಟನೆಗಳು ಪರಮಾಣು ಮೂಲಕ ದೇಶದ ಮೇಲೆ ಆಕ್ರಮಣಕ್ಕೆ ಮುಂದಾದರೆ, ಭಾರತ ಅವರಿಗೆ ಸೂಕ್ತ ಉತ್ತರ ನೀಡಲಿದೆ.
ಏಕೆಂದರೆ ಅಂತಹ ಆಕ್ರಮಣಗಳನ್ನು ಎದುರಿಸುವ ನಿಟ್ಟಿನಲ್ಲಿ ನಾವು ಪರಮಾಣು ರಕ್ಷಣಾ ಸಾಧನಗಳು ಮತ್ತು ಪರಮಾಣು ಸಿಡಿತಲೆಗಳನ್ನು ಹೊಂದಿದ್ದೇವೆ. ಅಂತಹ ಧೈರ್ಯವನ್ನು ಯಾರೂ ಕೂಡ ಪ್ರದರ್ಶಿಸುವುದಿಲ್ಲ ಎಂಬುದು ನನ್ನ ಭಾವನೆ. ಅಂತೆಯೇ 2017ರ ವೇಳೆಗೆ ಪ್ರಪಂಚದಲ್ಲಿರುವ ಪರಮಾಣು ಅಸ್ತ್ರಗಳ ಪ್ರಮಾಣ ಶೇ.50ರಷ್ಟು ಕಡಿಮೆಯಾಗಲಿದೆ ಎಂದು ಕಲಾಂ ವಿಶ್ವಾಸವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

