ಈಗಿನ ಸುದ್ದಿ

ಉತ್ತರಾಖಂಡ್: ಮತ್ತೆ ಭಾರಿ ಮಳೆ, ರಕ್ಷಣಾ ಕಾರ್ಯ ಸ್ಥಗಿತ

ಉತ್ತರಾಖಂಡ್: ಮತ್ತೆ ಭಾರಿ ಮಳೆ, ರಕ್ಷಣಾ ಕಾರ್ಯ ಸ್ಥಗಿತ
Published On :

ಡೆಹ್ರಾಡೂನ್: ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ ಮತ್ತೆ ಭಾರಿ ಮಳೆ ಆರಂಭವಾಗಿದ್ದು, ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.

ಹವಾಮಾನ ಇಲಾಖೆಯ ಎಚ್ಚರಿಕೆಯಂತೆಯೇ ಉತ್ತರಾಖಂಡ ರಾಜ್ಯಾದ್ಯಂತ ಭಾರಿ ಮಳೆ ಆರಂಭವಾಗಿದ್ದು, ರಕ್ಷಣಾ ಪಡೆಗಳು ಮತ್ತು ವಾಯು ಸೇನಾ ಪಡೆಗಳು ರಕ್ಷಣಾ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ರಾಜಧಾನಿ ಡೆಹ್ರಾಡೂನ್‌ನಲ್ಲಿಯೂ ಭಾರಿ ಮಳೆ ಸುರಿಯುತ್ತಿದ್ದು, ಎಲ್ಲ ಹೆಲಿಕಾಪ್ಟರ್‌ಗಳು ತಮ್ಮ ಹಾರಾಟವನ್ನು ನಿಲ್ಲಿಸಿವೆ. ರುದ್ರಪ್ರಯಾಗ, ಚಮೋಲಿ ಜಿಲ್ಲೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ರಸ್ತೆಗಳ ಮೇಲೆ ಮಣ್ಣು ಕುಸಿದು ಬಿದ್ದಿದೆ.

ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿರುವ ಕಾರಣ, ಬೆಟ್ಟಗುಡ್ಡಗಳಲ್ಲಿ ರಕ್ಷಣೆಗಾಗಿ ಕಾದಿದ್ದ ಸಾವಿರಾರು ಯಾತ್ರಿಕರು ಕಂಗಾಲಾಗಿದ್ದಾರೆ. ಮೂಲಗಳ ಪ್ರಕಾರ ಚಮೋಲಿ ಮತ್ತು ರುದ್ರಪ್ರಯಾಗ ಜಿಲ್ಲೆಗಳಲ್ಲಿಯೇ ಸುಮಾರು 10 ಸಾವಿರ ಮಂದಿ ನಿರಾಶ್ರಿತರು ಇದ್ದು, ರಕ್ಷಣೆಗಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಪ್ರತೀಕೂಲ ಹವಾಮಾನ ಮತ್ತು ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಸೈನಿಕರು ಅಸಹಾಯಕರಾಗಿದ್ದಾರೆ.

ಈ ನಡುವೆ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಇಲ್ಲಿಯವರೆಗೂ 1000 ಸಾವಿರ ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ರಾಜ್ಯಾದ್ಯಂತ ಮುಂಬರುವ ಶುಕ್ರವಾರದವರೆಗೂ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಒಂದು ವೇಳೆ ಶುಕ್ರವಾರದವರೆಗೂ ಮಳೆ ಮುಂದುವರೆದರೆ ಉತ್ತರಾಖಂಡ ರಾಜ್ಯ ಮತ್ತೊಂದು ಭಾರಿ ಪ್ರವಾಹಕ್ಕೆ ತುತ್ತಾಗುವ ಸಂಭವವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.