ಕೇಂದ್ರದ ರೈತರ ಸಾಲ ಮನ್ನಾ ಯೋಜನೆಯಲ್ಲಿ ಗಂಭೀರ ಅಕ್ರಮ: ಸಿಎಜಿ
ಕೇಂದ್ರ ಸರ್ಕಾರದ ರೈತರ ಬಡ್ಡಿ ಮತ್ತು ಸಾಲ ಮನ್ನಾ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಹಣ ಸೋರಿಕೆಯಾಗಿದ್ದು, ಅರ್ಹರಲ್ಲದ ರೈತರಿಗೆ ಈ ಯೋಜನೆ ದಕ್ಕಿದೆ ಎಂದು...

ನವದೆಹಲಿ: ಕೇಂದ್ರ ಸರ್ಕಾರದ ರೈತರ ಬಡ್ಡಿ ಮತ್ತು ಸಾಲ ಮನ್ನಾ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಗಂಭೀರ ಅಕ್ರಮ ನಡೆದಿದ್ದು, ಅರ್ಹರಲ್ಲದ ರೈತರಿಗೆ ಈ ಯೋಜನೆಯ ಫಲ ದಕ್ಕಿದೆ ಮತ್ತು ಭಾರೀ ಹಣ ಸೋರಿಕೆಯಾಗಿದೆ ಎಂದು ಕೇಂದ್ರ ಲೆಕ್ಕ ಪರಿಶೋಧಕ ಸಂಸ್ಥೆ (ಸಿಎಜಿ) ಮಂಗಳವಾರ ತಿಳಿಸಿದೆ.
ಈ ಸಂಬಂಧ ಸಿಎಜಿ ದಾಖಲೆಗಳನ್ನು ಪರಿಶೀಲಿಸಿದಾಗ ರು. 52000 ಕೋಟಿಯ ಭಾರಿ ಮೊತ್ತದ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆ ಸದುಪಯೋಗವಾಗಿಲ್ಲ, ಬದಲಾಗಿ ಅರ್ಹರಲ್ಲದ ರೈತರು ಈ ಯೋಜನೆಯಿಂದ ಲಾಭ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಸಿಎಜಿ ಪರಿಶೀಲಿಸಿದ ಒಟ್ಟು ದಾಖಲೆ (ಶೇ. 22.2ರಷ್ಟು)ಗಳಲ್ಲಿ ಫಲಾನುಭವಿಗಳಿಗೆ ಹಣ ದೊರಕದಿರುವುದು ಹಾಗೂ ಅರ್ಹರಲ್ಲದವರೇ ಹೆಚ್ಚಾಗಿ ಈ ಯೋಜನೆ ಲಾಭ ಪಡೆದುಕೊಂಡಿರುವುದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಸಾಲ ಮನ್ನಾ ಮತ್ತು ಬಡ್ಡಿ ಮನ್ನಾ ಯೋಜನೆಯಲ್ಲಿ ಕೃಷಿಯೇತರ ಚಟುವಟಿಕೆಗಾಗಿ ಸಾಲವನ್ನು ಪಡೆದ ರೈತರು ಸಹ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಸಿಎಜಿ ತಿಳಿಸಿದೆ.
ಅರ್ಹರಲ್ಲದ ಫಲಾನುಭವಿಗಳು ಈ ಯೋಜನೆಯಿಂದ ಲಾಭ ಪಡೆದಿದ್ದು, ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಬ್ಯಾಂಕ್ಗಳಿಗೆ ಸಿಎಜಿ ಸಲಹೆ ನೀಡಿದೆ. ಸಾಲ ಮನ್ನಾ ಯೋಜನೆಯಲ್ಲಿ ಒಟ್ಟು 3.69 ಸಣ್ಣ ಹಾಗೂ 60 ಲಕ್ಷ ಮಧ್ಯಮ ರೈತರು ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


