'ನಿರ್ಭಯಾ'ಗೆ ಅಂತರಾಷ್ಟ್ರೀಯ ಮಹಿಳಾ ಶೌರ್ಯ ಪ್ರಶಸ್ತಿ
ಅಮೆರಿಕ ನೀಡುವ ಅಂತರಾಷ್ಟ್ರೀಯ ಮಹಿಳಾ ಶೌರ್ಯ ಪ್ರಶಸ್ತಿ ಈ ಬಾರಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಮೃತಪಟ್ಟ 23 ವರ್ಷದ ಯುವತಿಯ ನಿರ್ಭಯಳ...
ವಾಷಿಂಗ್ಟನ್ ಡಿ.ಸಿ: ಅಮೆರಿಕ ನೀಡುವ ಅಂತರಾಷ್ಟ್ರೀಯ ಮಹಿಳಾ ಶೌರ್ಯ ಪ್ರಶಸ್ತಿ ಈ ಬಾರಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಮೃತಪಟ್ಟ 23 ವರ್ಷದ ಯುವತಿಯ ನಿರ್ಭಯಳ ಪಾಲಾಗಿದೆ. ಅಮೆರಿಕದ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ನಿರ್ಭಯಳಿಗೆ ಈ ಪ್ರಶಸ್ತಿಯನ್ನು ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ಶೌರ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸೋಮವಾರ ಅಮೆರಿಕದ ಪ್ರಧಾನ ಕಾರ್ಯದರ್ಶಿ ಜಾನ್ ಕೇರಿ ಅಧಿಕೃವಾಗಿ ಘೋಷಿಸಿದ್ದಾರೆ. ಈ ಪ್ರಶಸ್ತಿಯನ್ನು ಅಮೆರಿಕದಲ್ಲಿ ಮಾರ್ಚ 8ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಮಾ ಅವರ ಪತ್ನಿ ಮಿಚಿಲ್ ಒಬಾಮ ಅವರು ನೀಡಲಿದ್ದಾರೆ.
ವಿಶ್ವಾದ್ಯಂತ ಒಟ್ಟು 10 ಮಹಿಳೆಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅಫಘಾನಿಸ್ತಾನದ ಮಹಿಳಾ ಶಿಕ್ಷಣ ಹೋರಾಟಗಾರ್ತಿ ಮಲಾಲಾಗೂ ಪ್ರಶಸ್ತಿ ಸಂದಿದೆ. ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಕಾನೂನಾತ್ಮಕವಾಗಿ ಹೋರಾಟ, ಆದರ್ಶ ಗುಣಗಳು, ಧೈರ್ಯ, ಸಾಹಸಗಳನ್ನು ಮೆರೆದ ಮಹಿಳೆಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಪ್ರಶಸ್ತಿಗೆ ಪುರಸ್ಕೃತರು
ನಿರ್ಭಯ (ದೆಹಲಿ)
ಮಲಾಲಾ (ಅಫ್ಘಾನಿಸ್ತಾನ)
ಸಮೀರಾ ಇಬ್ರಾಹಿಂ (ಈಜಿಪ್ಟ್)
ಜುಲೀತಾ (ಹೌಂಡರ್ಸ್)
ಡಾ.ಜೋಸ್ಸ್ಫಿನ್ (ನೈಜೀರಿಯಾ)
ಎಲಿನಾ (ರಷ್ಯಾ)
ಫಾರಟೂನ್ ಆಡನ್ (ಸೊಮಾಲಿಯಾ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

