ಈಗಿನ ಸುದ್ದಿ

ಕಾಪ್ಟರ್ ಹಗರಣ: ಸಿಬಿಐನಿಂದ ತ್ಯಾಗಿ ಸಹೋದರರ ವಿಚಾರಣೆ

ಬಹುಕೋಟಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ವಾಯುಸೇನೆ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರ ಸಹೋದರ ಡಕೋಸಾ ತ್ಯಾಗಿ ಅವರನ್ನು...

ಕಾಪ್ಟರ್ ಹಗರಣ: ಸಿಬಿಐನಿಂದ ತ್ಯಾಗಿ ಸಹೋದರರ ವಿಚಾರಣೆ
Published On :

ನವದೆಹಲಿ: ಬಹುಕೋಟಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ವಾಯುಸೇನೆ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರ ಸಹೋದರ ಡಕೋಸಾ ತ್ಯಾಗಿ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯ ಪರವಾಗಿ ಯುರೋಪಿಯನ್ ಮಧ್ಯವರ್ತಿ ಕಾರ್ಲೋ ಜೆರೋಸಾ ಮತ್ತು ಗುಡೋ ಹಸ್ಕೆ ಎಂಬುವರು ಭಾರತದಲ್ಲಿ ಲಾಬಿ ನಡೆಸಿದ್ದಾರೆ ಎಂದು ಇಟಲಿಯ ತನಿಖಾ ಅಧಿಕಾರಿಗಳಿಂದ ಬಹಿರಂಗಗೊಂಡಿತ್ತು. ಈ ಮಧ್ಯವರ್ತಿಗಳೊಂದಿಗೆ ಜುಲಿ ಮತ್ತು ಡಕೋಸಾ ಸಂಬಂಧವಿಟ್ಟುಕೊಂಡಿದ್ದರಿಂದ ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಜೆರೋಸಾ ಮತ್ತು ಗುಡೋ ಹಸ್ಕೆ ಎಂಬುವರು ಭಾರತದ ವಾಯುಸೇನೆಯ ಮಾಜಿ ಮುಖ್ಯಸ್ಥರ ಕುಟಂಬದೊಂದಿಗೆ ಸಂಪರ್ಕದಲ್ಲಿದ್ದು, ಪ್ರಮುಖವಾಗಿ ಮಾಜಿ ಮುಖ್ಯಸ್ಥರ ಮೂವರು ಸಹೋದರರಾದ ಜೂಲಿ, ಡಕೋಸಾ ಮತ್ತು ಸಂದೀಪ್ ಜೊತೆಗೆ ಹೆಚ್ಚು ಸಂಪರ್ಕವಿಟ್ಟುಕೊಂಡಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಇಟಲಿಯ ಪ್ರಾಸಿಕ್ಯೂಟರ್ ಹೇಳಿದ್ದಾರೆ.

ಈ ಸಂಬಂಧ ತನಿಖೆ ನಡೆಸಿದ ಇಟಲಿ ಸರ್ಕಾರ, ಇಟಲಿಯ ಕಂಪನಿಯ ಇಬ್ಬರು ಸಿಇಓಗಳನ್ನು ಬಂಧಿಸಿತ್ತು. ಭಾರತದಲ್ಲಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಖರೀದಿ ಒಪ್ಪಂದ ಮಾಡುವಂತೆ 72 ಲಕ್ಷ ರುಪಾಯಿಯನ್ನು ತ್ಯಾಗಿ ಕುಟುಂಬಕ್ಕೆ ನೀಡುವಂತೆ ಯುರೋಪಿಯನ್ ಮಧ್ಯವರ್ತಿಗೆ ನೀಡಿದ್ದರು ಎಂದು ಬಂಧಿತರು ತನಿಖೆ ವೇಳೆ ತಿಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.