ಮತಗಟ್ಟೆಯಲ್ಲಿ ಬ್ಲೂಫಿಲಂ ವೀಕ್ಷಿಸುತ್ತಿದ್ದ ಅಧಿಕಾರಿ ಅಮಾನತ್ತು
ಸ್ಥಳೀಯ ಸಂಸ್ಥೆ ಚುನಾವಣೆಯ ಮತಗಟ್ಟೆ ವಾರ್ಡ್ ನಂ. 28ರಲ್ಲಿ ಬ್ಲೂಫಿಲಂ ವೀಕ್ಷಿಸುತ್ತಿದ್ದ ಚುನಾವಣಾ ಅಧಿಕಾರಿಯನ್ನು...
ಚಾಮರಾಜನಗರ: ಸ್ಥಳೀಯ ಸಂಸ್ಥೆಯ ಚುನಾವಣೆಯ ಮತಗಟ್ಟೆಯ ವಾರ್ಡ್ ನಂ. 28ರಲ್ಲಿ ಕರ್ತವ್ಯ ಮರೆತು ಬ್ಲೂಫಿಲಂ ವೀಕ್ಷಿಸುತ್ತಿದ್ದ ಚುನಾವಣಾ ಅಧಿಕಾರಿಯನ್ನು ಅಮಾನತ್ತು ಮಾಡಿದ ಘಟನೆ ಗುರುವಾರ ಚಾಮರಾಜನಗರದಲ್ಲಿ ನಡೆದಿದೆ.
ಇಂದು ಸ್ಥಳೀಯ ಸಂಸ್ಧೆಗಳಿಗೆ ಮತದಾನ ನಡೆಯುತ್ತಿದ್ದು, ಚಾಮರಾಜನಗರದ ವಾರ್ಡ್ ನಂ. 28ರ ಚುನಾವಣಾ ಅಧಿಕಾರಿ ಪರಮಶಿವಯ್ಯ ಎಂಬುವರು ಕರ್ತವ್ಯ ಮರೆತು ಮೊಬೈಲ್ನಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದರು. ಅಲ್ಲದೇ ಮತದಾನ ಮಾಡಲು ಬಂದ ಮಾತದಾರರ ಜೊತೆ ಅಸಭ್ಯವಾಗಿ ನಡೆದುಕೊಂಡಿದಲ್ಲದೇ ಅವರನ್ನು ಕೆಟ್ಟ ಶಬ್ಧಗಳಿಂದ ನಿಂದಿಸಿದ್ದಾರೆ.
ಇತನ ವರ್ತನೆಯಿಂದ ಬೇಸತ್ತ ಸಾರ್ವಜನಿಕರು, ಜಿಲ್ಲಾಡಳಿತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಪರಮಶಿವಯ್ಯ ಅವರನ್ನು ಅಮಾನತು ಮಾಡಲಾಗಿದೆ.
ರಾಜ್ಯಾದ್ಯಂತ ಇಂದು ಬೆಳಗ್ಗೆಯಿಂದಲೇ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆ ಮತದಾರ ಹೆಸರು ನಾಪತ್ತೆಯಾಗಿದ್ದು, ಆನೇಕಲ್ಲು, ಧಾರವಾಡ, ಯಾದಗಿರಿ, ಗುಲ್ಬರ್ಗಾ ,ರಾಯಚೂರಿನಲ್ಲಿ ಈ ಸಂಬಂಧ ಗಲಾಟೆಯುಂಟಾಗಿ ಮತದಾನ ಸ್ಥಗಿತಗೊಂಡಿದೆ. ಗದಗನಲ್ಲಿ ಚುನಾವಣಾ ಅಧಿಕಾರಿಯಿಂದಲೇ ಅಕ್ರಮ ನಡೆದಿದೆ.
ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ. 4ರಲ್ಲಿ ಒಟ್ಟು 75 ತಿರಸ್ಕಾರಗೊಂಡ ಮತಗಳು ಚಲಾವಣೆಯಾಗಿದ್ದು, ಕಣದಲ್ಲಿದ್ದ 7 ಅಭ್ಯರ್ಥಿಗಳಿಗೆ ತಿರಸ್ಕಾರದ ಮತ ಹಾಕಲಾಗಿದೆ. ಭಗತ್ಸಿಂಗ್ ಸೇನೆಯ ಕಾರ್ಯಕರ್ತರು ಈ ತಿರಸ್ಕಾರಗೊಂಡ ಮತಗಳನ್ನು ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಇಲ್ಲಿಯವರೆಗೆ ದಾವಣಗೆರೆ-ಶೇ. 40, ಯಾದಗಿರಿ- 30, ಮೈಸೂರು-35, ಮಂಡ್ಯ-45, ಉಡುಪಿ-52, ಬೆಳಗಾವಿ- 48, ಚಿಕ್ಕಬಳ್ಳಾಪುರ- 44, ಗದಗ- 45, ಅಥಣಿ- 60, ರಾಯಭಾಗ-62, ಚಿಕ್ಕೋಡಿ-62, ಬಾಗಲಕೋಟೆ-45, ಬೀದರ್35ರಷ್ಟು ಮತದಾನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

