ಇಟಲಿ ರಾಯಭಾರಿ ಏ. 2ವರೆಗೆ ಸ್ವದೇಶಕ್ಕೆ ತೆರಳುವಂತಿಲ್ಲ: ಸುಪ್ರೀಂ
ನವದೆಹಲಿ: ಭಾರತ ಮೀನುಗಾರರ ಹತ್ಯೆ ಪ್ರಕರಣದಲ್ಲಿ ಇಟಲಿ ದೂತವಾಸವನ್ನು ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ, ಪ್ರಕರಣದ ವಿಚಾರಣೆ ಮುಂದಿನ ಏಪ್ರೀಲ್ 2ಕ್ಕೆ ನಡೆಯಲಿದ್ದು ಅಲ್ಲಿಯವರೆಗೆ ತನ್ನ ಆದೇಶದ ಹೊರತು ಭಾರತ ಬಿಟ್ಟು ಸ್ವದೇಶಕ್ಕೆ ತೆರಳುವಂತಿಲ್ಲ ಎಂದು ಇಟಲಿ ರಾಯಭಾರಿಗೆ ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ.
ಇಂದು ಪ್ರಕರಣದ ವಿಚಾರಣೆ ಆಲಿಸಿದ ಸುಪ್ರೀಂ ಕೋರ್ಟ್, ಮೀನುಗಾರರ ಹತ್ಯೆ ಪ್ರಕರಣದಲ್ಲಿ ಮಾರ್ಚ್ 22ರೊಳಗೆ ಇಟಲಿ ನೌಕಾ ಅಧಿಕಾರಿಗಳನ್ನು ಭಾರತಕ್ಕೆ ವಾಪಸ್ಸು ಕರೆತರಲು ರಾಯಭಾರಿ ಕಚೇರಿ ವಿಫಲವಾಗಿದೆ. ಅಲ್ಲದೇ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದೆ ಎಂದು ಹೇಳಿದೆ.
ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಇಟಲಿ ರಾಯಭಾರಿ, ತಾನು ಭಾರತ ಬಿಟ್ಟು ವಿದೇಶಕ್ಕೆ ತೆರಳುವುದಿಲ್ಲ ಎಂದು ಕೋರ್ಟ್‌ಗೆ ಭರವಸೆ ನೀಡಿದರು. ಆದರೆ ಇಟಲಿ ರಾಯಭಾರಿಯನ್ನು ನಂಬುಲು ಸಾಧ್ಯವಿಲ್ಲ, ಮುಂದಿನ ಆದೇಶದ ಬರುವವರೆಗೆ ಭಾರತ ಬಿಟ್ಟು ವಿದೇಶಕ್ಕೆ ತೆರಳುವಂತಿಲ್ಲ ಎಂದು ಇಟಲಿ ರಾಯಭಾರಿಗೆ ಕೋರ್ಟ್ ಸೂಚಿಸಿದೆ. ಅಲ್ಲದೆ ಈ ಸಂಬಂಧ ಇಟಲಿ ರಾಯಭಾರಿ ದೇಶಬಿಟ್ಟು ತೆರಳದಂತೆ ನೋಡಿಕೊಳ್ಳಬೇಕು ಎಂದು ವಿದೇಶಾಂಗ ಸಚಿವಾಲಯಕ್ಕೆ ಹಾಗೂ ಭದ್ರತಾ ಪಡೆಗೆ ಕೋರ್ಟ್ ಆದೇಶಿಸಿದೆ.
ಈ ಮಧ್ಯೆ ಸುಪ್ರೀಂ ಆದೇಶಕ್ಕೆ ಪ್ರತಿಕ್ರಿಯಿಸಿರುವ ಇಟಲಿ ಸರ್ಕಾರ, ಭಾರತ ವಿಯನ್ನಾ ರಾಜತಾಂತ್ರಿಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಒಪ್ಪಂದದ ಅನ್ವಯ ತನ್ನ ರಾಯಭಾರಿಯನ್ನು ರಾಷ್ಟ್ರಬಿಟ್ಟು ತೆರಳದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

