ಈಗಿನ ಸುದ್ದಿ

ಭಾರತದ ಮಡಿಲಿಗೆ ಟೆಸ್ಟ್ ಸರಣಿ: ಆಸೀಸ್ ವಿರುದ್ಧ 6 ವಿಕೆಟ್ಗಳ ಜಯ

ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಭರ್ಜರಿ ಜಯಗಳಿಸುವ ಮೂಲಕ ಪ್ರತಿಷ್ಠಿತ ಬಾರ್ಡ್‌ರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು...

Published On :

ಮೊಹಾಲಿ: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಭರ್ಜರಿ ಜಯಗಳಿಸುವ ಮೂಲಕ ಪ್ರತಿಷ್ಠಿತ ಬಾರ್ಡ್‌ರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಕೈ ವಶಮಾಡಿಕೊಂಡಿದೆ.

ಆಸೀಸ್ ವಿರುದ್ಧದ 3ನೇ ಪಂದ್ಯದಲ್ಲೂ 6 ವಿಕೆಟ್‌ಗಳ ಅಂತರದಿಂದ ಜಯಸಾಧಿಸಿರುವ ಧೋನಿ ಪಡೆ, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.

ಆಸೀಸ್‌ನ 133ರನ್‌ಗಳ ಸಾಧಾರಣಾ ಗುರಿಯ ಬೆನ್ನುಹತ್ತಿದ ಭಾರತ, ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜಾರ್ ಅವರು ಹ್ಯಾಟ್ರಿಕ್ ಜಯದ ಹಾದಿಯನ್ನು ಸುಗಮಗೊಳಿಸಿದರು. ಈ ಇಬ್ಬರು ಆಟಗಾರರು 30ರನ್‌ಗಳ ಜೊತೆಯಾಟ ಟೀಂ ಇಂಡಿಯಾದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.

ಆಸ್ಟ್ರೇಲಿಯಾದ 408ರನ್‌ಗಳ ಬೃಹತ್ ಗುರಿಯನ್ನಟ್ಟಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 499/10ರನ್‌ಗಳನ್ನು ಪೇರಿಸುವ ಮೂಲಕ 97ರನ್‌ಗಳ ಇನಿಂಗ್ಸ್ ಮುನ್ನಡೆಯನ್ನು ಸಾಧಿಸಿತ್ತು. ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಸ್ವೀನ್ ದಾಳಿಯನ್ನು ಎದುರಿಸಲಾಗದೆ 233ರನ್‌ಗಳಿಗೆ ಆಲೌಟ್‌ಆಗಿತ್ತು. ಭಾರತದ ಪರ ಶಿಖರ್ ಧವನ್ ಪಂದ್ಯ ಶೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸ್ಕೋರ್ ವಿವರ
ಬ್ಯಾಟಿಂಗ್: ಮುರಳಿ ವಿಜಯ್ 26, ಚೇತೇಶ್ವರ್ ಪೂಜಾರ್ 28, ಕೋಹ್ಲಿ 34ರನ್ ಪೇರಿಸಿದ್ದಾರೆ.
ಬೌಲಿಂಗ್: ಬಿ ಕುಮಾರ್ 3, ಆರ್.ಅಶ್ವೀನ್ 2, ರವೀಂದ್ರ ಜಡೇಜಾ 3, ಓಜಾ 2 ವಿಕೆಟ್‌ಗಳನ್ನು ಪಡೆದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.