ಸರಬ್ಜಿತ್ ಹತ್ಯೆ ಪ್ರಕರಣ, ನ್ಯಾಯಾಂಗ ತನಿಖೆಗೆ ಪಾಕ್ ಆದೇಶ

ನವದೆಹಲಿ/ಲಾಹೋರ್: ಸಹ ಖೈದಿಗಳಿಂದ ತೀವ್ರ ಹಲ್ಲೆಗೊಳಗಾಗಿ ಕೊನೆಯುಸಿರೆಳೆದ ಸರಬ್ಜಿತ್ ಸಿಂಗ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಪಾಕಿಸ್ತಾನ ಸರ್ಕಾರ ಗುರುವಾರ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತನಿಖೆ ಆಗಬೇಕೆಂದು ಭಾರತ ಸರ್ಕಾರ ಬೀಗಿಪಟ್ಟು ಹಿಡಿದಿದ್ದರಿಂದ, ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರಬ್ಜಿತ್ ಸಿಂಗ್ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಪ್ರಕರಣದ ಕುಲಂಕುಶ ತನಿಖೆ ಆಗಲಿದೆ ಎಂದು ಹೇಳಿದೆ.
ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿದ್ದ ಸರಬ್ಜಿತ್ ಸಿಂಗ್ ಇಂದು ಮುಂಜಾನೆ ಅಸುನಿಗಿದ್ದರು, ಇದಕ್ಕೆ ದೇಶದ ಜನತೆ ಹಾಗು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು, ಪಾಕ್ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.
ಇಂದು ಸಂಸತ್ನಲ್ಲಿ ಸರಬ್ಜಿತ್ ಸಿಂಗ್ ಪ್ರಕರಣವನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳು, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡವು ಹಾಗು ಪ್ರಕರಣದ ಬಗ್ಗೆ ಕಾನೂನು ತನಿಖೆ ಆಗಬೇಕು ಎಂದು ಯುಪಿಎ ಸರ್ಕಾರವನ್ನು ಒತ್ತಾಯಿಸಿದ್ದವು.
ಸಂತಾಪ ಸೂಚಿಸಿದ ಪ್ರಧಾನಿ
ಭಾರತದ ಕೈದಿ ಸರಬ್ಜಿತ್ ಸಿಂಗ್ ಸಾವು ನನ್ನ ಮನಸ್ಸಿಗೆ ತುಂಬಾ ಆಘಾತ ಹಾಗು ನೋವುಂಟು ಮಾಡಿದ್ದು, ಇಂದೊಂದು ದುರಾದೃಷ್ಟಕರ ಸಂಗತಿ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.
ಭಾರತದ ಹೆಮ್ಮೆ ಪುತ್ರನಾಗಿದ್ದ ಸರಬ್ಜಿತ್ ಸಿಂಗ್ ಅಸಂಘಟಿತ ವ್ಯಕ್ತಿತ್ವವನ್ನು ಹಾಗು ಅನ್ಯಾಯವನ್ನು ಖಂಡಿಸುವ ಮನೋಸ್ಥೈರ್ಯ ಹೊಂದಿದ್ದರು ಎಂದು ಸರಬ್ಜಿತ್ ಬಗ್ಗೆ ಪ್ರಧಾನಿ ಹೆಮ್ಮೆಯ ಮಾತುಗಳಾಡಿದ್ದಾರೆ.
ಸರಬ್ಜಿತ್ ಮೃತದೇಹವನ್ನು ತಾಯ್ನಾಡಿಗೆ ತರಿಸುವ ಎಲ್ಲಾ ಪ್ರಕ್ರಿಯೆಗಳು ಸಂಪೂರ್ಣ ಮುಗಿದಿದೆ. ಸರಬ್ಜಿತ್ ಸಿಂಗ್ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ಆತನ ಕುಟುಂಬ ವರ್ಗಕ್ಕೆ ನೀಡಲಿ ಎಂದು ಆಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


