ತಿಹಾರ್ನಲ್ಲಿ ಖೈದಿಗಳ ಗುಂಪು ಘರ್ಷಣೆ: 1 ಸಾವು
ನವದೆಹಲಿ: ದೆಹಲಿಯ ತಿಹಾರ್ ಜೈಲಿನಲ್ಲಿ ಶುಕ್ರವಾರ ನಡೆದ ಖೈದಿಗಳ ಗುಂಪು ಘರ್ಷಣೆ ವೇಳೆ ಓರ್ವ ಖೈದಿ ಮೃತಪಟ್ಟಿದ್ದು, 5 ಮಂದಿಗೆ ಗಂಭೀರ ಗಾಯಗಳಾಗಿವೆ.
ನಿನ್ನೆ ಸಂಜೆ 4 ಗಂಟೆಯ ಸುಮಾರಿಗೆ ಇಬ್ಬರು ಖೈದಿಗಳ ಮಧ್ಯೆ ಸಂಭವಿಸಿದ ಸಣ್ಣ ಪ್ರಮಾಣದ ಕಿತ್ತಾಟ ಗುಂಪುಘರ್ಷಣೆಯಾಗಿ ಮಾರ್ಪಟ್ಟು, ಓರ್ವ ಖೈದಿಯ ಸಾವಿಗೆ ಕಾರಣವಾಗಿದೆ. ಮೃತನನ್ನು ಸೀಲಂಪುರ್ ನಿವಾಸಿ ಜಾವೆದ್ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಇತರೆ 5 ಖೈದಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘರ್ಷಣೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಜೈಲು ಅಧೀಕ್ಷಕರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ದೇಶದ ಅತ್ಯಂತ ಸುಭದ್ರ ಜೈಲು ಎಂಬ ಖ್ಯಾತಿ ಪಡೆದಿರುವ ದೆಹಲಿಯ ತಿಹಾರ್ ಜೈಲಿನಲ್ಲಿಯೇ ಖೈದಿಗಳ ನಡುವೆ ಘರ್ಷಣೆ ಸಂಭವಿಸಿರುವುದು ಅಚ್ಚರಿಗೆ ಕಾರಣವಾಗಿದೆ. ತಿಹಾರ್ ಜೈಲಿಗೆ 3 ಹಂತಗಳಲ್ಲಿ ಭದ್ರತೆ ಏರ್ಪಡಿಸಲಾಗಿದ್ದು, ಇದರ ನಡುವೆಯೇ ಖೈದಿಗಳು ಘರ್ಷಣೆಗೆ ಇಳಿಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಮೂಡುತ್ತಿದೆ. ಇದೇ ಕೇವಲ 2 ತಿಂಗಳ ಹಿಂದೆಯಷ್ಟೇ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ರಾಮ್ಸಿಂಗ್ ತನ್ನ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಇದಾದ ಒಂದು ದಿನದ ಅಂತರದಲ್ಲಿ ವಿಚಾರಣಾಧೀನ ಮಹಿಳಾ ಖೈದಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಳು.
ಒಟ್ಟಾರೆ ದೇಶದ ಅತ್ಯಂತ ಸುಭದ್ರ ಜೈಲು ಎಂಬ ಖ್ಯಾತಿಗಳಿಸಿದ್ದ ದೆಹಲಿಯ ತಿಹಾರ್ ಜೈಲು, ಇತ್ತೀಚಿನ ದಿನಗಳಲ್ಲಿ ಖೈದಿಗಳ ಸರಣಿ ಸಾವಿಗೆ ಸಾಕ್ಷಿಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

