ಈಗಿನ ಸುದ್ದಿ

ಕರೆಂಟ್ ಶಾಕ್: ಪ್ರತಿ ಯೂನಿಟ್‌ಗೆ 23 ಪೈಸೆ ಹೆಚ್ಚಳ

ಕರೆಂಟ್ ಶಾಕ್: ಪ್ರತಿ ಯೂನಿಟ್‌ಗೆ 23 ಪೈಸೆ ಹೆಚ್ಚಳ
Published On :

ಬೆಂಗಳೂರು: ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ನೀಡಿದ್ದು, ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 23 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು, ಪ್ರತಿ ಯೂನಿಟ್ ವಿದ್ಯುತ್ ದರವನ್ನು 23 ಪೈಸೆಗಳಷ್ಟು ಹೆಚ್ಚಿಸಿರುವುದಾಗಿ ತಿಳಿಸಿದರು. ಅಂತೆಯೇ ಗೃಹ ಬಳಕೆ ವಿದ್ಯುತ್ ದರವನ್ನು ಕೂಡ ಏರಿಸಿರುವ ಇಲಾಖೆ, ಗೃಹ ಬಳಕೆ ವಿದ್ಯುತ್ ದರದಲ್ಲಿ 20 ಪೈಸೆಯಷ್ಟು ಏರಿಕೆ ಮಾಡಿದೆ. ಗೃಹ ಬಳಕೆ ವಿದ್ಯುತ್ ದರವನ್ನು 100 ಯೂನಿಟ್‌ಗಳವರೆಗೆ 20 ಪೈಸೆ ಹೆಚ್ಚಳ ಮಾಡಿದ್ದು, 100ಯೂನಿಟ್‌ಗಳಿಗಿಂತಲೂ ಮೀರಿ ವಿದ್ಯುತ್ ಬಳಕೆ ಮಾಡಿದರೆ ಪ್ರತಿ ಯೂನಿಟ್ ಮೇಲೆ ಸರಾಸರಿ 23ಪೈಸೆಯಿಂದ 30ಪೈಸೆಯಷ್ಟು ದರ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರ ಏರಿಕೆ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದ್ದು, ನೀರಾವರಿ ಪಂಪ್‌ಸೆಟ್, ಭಾಗ್ಯಜ್ಯೋತಿ ಯೋಜನೆ ಮತ್ತು ಕುಟೀರಜ್ಯೋತಿ ವಿದ್ಯುತ್ ಯೋಜನೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ರೀತಿಯ ವಿದ್ಯುತ್‌ಯೋಜನೆಗಳಿಗೆ ನೂತನ ದರಗಳು ಅನ್ವಯವಾಗಲಿದೆ. ಪ್ರತಿ ಯೂನಿಟ್ ವಿದ್ಯುತ್ ಮೇಲೆ ಸರಾಸರಿ 70 ಪೈಸೆ ಹೆಚ್ಚಳಕ್ಕೆ ವಿದ್ಯುತ್‌ಚ್ಛಕ್ತಿ ಸಂಸ್ಥೆಗಳು ಪ್ರಸ್ತಾವನೆ ಇಟ್ಟಿದ್ದವು. ಆದರೆ ದರ ಹೆಚ್ಚಳ ಕುರಿತು ಇಂದು ನಡೆದ ಸಭೆಯಲ್ಲಿ 23ರಿಂದ 30ಪೈಸೆಯಷ್ಟು ಮಾತ್ರ ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ನೂತನ ದರಗಳು ಮೇ 1ರಿಂದಲೇ ಜಾರಿಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರ ಹೊರಡಿಸಿರುವ ಆದೇಶದ ಮೇರೆಗೆ ಎಲ್ಲ ವಿಭಾಗದ ವಿದ್ಯುತ್ ದರಗಳ ಮೇಲೆ ಸರಾಸರಿ 20 ರಿಂದ 30 ಪೈಸೆಗಳಷ್ಟು ಏರಿಕೆಯಾಗಿದೆ. ಒಟ್ಟಾರೆ ಮತದಾನ ಮುಗಿಯುತ್ತಿದ್ದಂತೆಯೇ ರಾಜ್ಯದ ಜನರಿಗೆ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಪ್ರಾಧಿಕಾರ ಶಾಕ್ ನೀಡಿದೆ. ಕಳೆದ ಬಾರಿಯ ದರ ಏರಿಕೆಗೆ ಹೋಲಿಸಿದರೆ ಈ ಬಾರಿ ಸುಮಾರು 10 ಪೈಸೆಯಷ್ಟು ದರ ಏರಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.