ಸಜ್ಜನ್ ನಿರ್ಧೋಷಿ: ಸಂಸತ್ ಎದುರು ಸಿಖ್ಖರ ಪ್ರತಿಭಟನೆ

ನವದೆಹಲಿ: 1984ರ ಸಿಖ್ಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರವೂ ಮುಂದುವರೆದಿದ್ದು, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರ ಸಾಹಸಪಡುತ್ತಿದ್ದಾರೆ.
ಪ್ರಕರಣದಿಂದ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯದ ತೀರ್ಪಿನ ವಿರುದ್ಧ ಸಿಖ್ಖ್ ಧರ್ಮೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರ ಮತ್ತು ಸೋನಿಯಾ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ನವದೆಹಲಿಯ ಹೃದಯ ಭಾಗದಲ್ಲಿರುವ ವಿಜಯ್ ಚೌಕ್ನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ರಾಷ್ಟ್ರಪತಿ ಭವನ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ, ರಾಷ್ಟ್ರಪತಿ ಭವನ ರಸ್ತೆ ಬಹುತೇಕ ಬಂದ್ ಆಗಿದೆ.
ಅಂತೆಯೇ ಸಂಸತ್ ರಸ್ತೆಯಲ್ಲಿಯೂ ಪ್ರತಿಭಟನೆ ನಡೆಯುತ್ತಿದ್ದು, ಸಂಸತ್ಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಪ್ರಯತ್ನಿಸುತ್ತಿದ್ದಾರೆ. ಸಂಸತ್ ಗೇಟ್ ಬಳಿ ಹಾಕಿರುವ ಬ್ಯಾರಿಕೇಡ್ಗಳು ಪ್ರತಿಭಟನಾಕಾರರ ನೂಕುನುಗ್ಗಲಿಗೆ ಸಿಲುಕಿ ಮುರಿದುಹೋಗಿವೆ. ಅಲ್ಲದೆ ಸಂಸತ್ನ ದಕ್ಷಿಣ ಭಾಗ ಬಹುತೇಕ ಬಂದ್ ಆಗಿದೆ. ಪ್ರಧಾನಿಗಳ ಕಚೇರಿ, ಕೇಂದ್ರ ಗೃಹ ಇಲಾಖೆಯ ಕಚೇರಿ, ವಿತ್ತ ಇಲಾಖೆಯ ಕಚೇರಿ ಮತ್ತು ವಿದೇಶಾಂಗ ಇಲಾಖೆಯ ಕಚೇರಿಗಳು ಪ್ರತಿಭಟನೆಯಿಂದಾಗಿ ಮುಚ್ಚಲ್ಪಟ್ಟಿವೆ.
ಒಟ್ಟಾರೆ ಸಿಖ್ಖ್ ನರಮೇಧ ಪ್ರಕರಣದಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸಂಸತ್, ಸಿಖ್ಖರ ಪ್ರತಿಭಟನೆಯಿಂದಾಗಿ ಅಕ್ಷರಶಃ ಬಂದ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


