'ಜಿ' ಸೈಟ್ ಪಡೆದ ಆರೋಪ: ವೀರಣ್ಣ ಮಂತ್ರಿ ಸ್ಥಾನಕ್ಕೆ ವಿರೋಧ

ಹುಬ್ಬಳಿ: ಕಾಂಗ್ರೆಸ್ ನಾಯಕ ವೀರಣ್ಣ ಮತ್ತಿಕಟ್ಟಿ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕಾಂಗ್ರೆಸ್ ಮುಖಂಡ ಪ್ರಫುಲ್ ಚಂದ್ರ ಅವರು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರಾಗಿರುವ ಪ್ರಫುಲ್ ಚಂದ್ರ ರಾಯನಗೌಡ ಅವರು ಇಂದು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ವೀರಣ್ಣ ಅವರ ಒಟ್ಟು ಆರು ಆರೋಪಗಳ ಕುರಿತು ಪ್ರಫುಲ್ ಚಂದ್ರ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ.
'ಕಾಂಗ್ರೆಸ್ ಮುಖಂಡರಾಗಿರುವ ವೀರಣ್ಣ ಮತ್ತಿಕಟ್ಟಿ ಅವರು ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಹೆಸರಲ್ಲಿ ಅಕ್ರಮವಾಗಿ ಜಿ ಕೆಟಗರಿ ಸೈಟ್ಗಳನ್ನು ಪಡೆದಿದ್ದಾರೆ. ಪುತ್ರ ಮಹೇಶ್, ಮಗಳು ವಿದ್ಯಾ ಮತ್ತು ಅಳಿಯ ಪ್ರವೀಣ್ ಹೆಸರಲ್ಲಿ ಜಿ ಕೆಟಗರಿಯ ಸೈಟ್ ಪಡೆದುಕೊಂಡಿದ್ದು, ತಮ್ಮ ಹೆಸರಿನಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಶಾಸಕರ ವಸತಿ ನಿರ್ಮಾಣ ಸಂಘದಿಂದ ಪಡೆದಿರುವ 1 ಸೈಟ್ಗೆ 5 ಲಕ್ಷ ರು. ಮುಂಗಡ ಹಣಪಾವತಿ ಮಾಡಿದ್ದಾರೆ ಎಂದು ಪ್ರಫುಲ್ ಚಂದ್ರ ಗಂಭೀರ ಆರೋಪ ಮಾಡಿದರು.
ಅಲ್ಲದೆ 'ಹುಬ್ಬಳ್ಳಿಯ ಹೊರವಲಯದಲಿ 65 ಎಕರೆ ಕೃಷಿ ಭೂಮಿಯನ್ನು ್ಲ ಬೇನಾಮಿ ಹೆಸರಲ್ಲಿ ಖರೀದಿ ಮಾಡಿದ್ದಾರೆ. ಸಚಿವಾಲಯಕ್ಕೆ ಸುಳ್ಳು ದಾಖಲೆ ನೀಡಿ ನಗರದಲ್ಲಿರುವ ತಮ್ಮ ಮಾಲೀಕತ್ವದ ಮೂರು ಶಿಕ್ಷಣ ಸಂಸ್ಥೆಗಳಿಗೆ ಪೀಠೋಪಕರಣಗಳನ್ನು ಪಡೆದುಕೊಂಡಿದ್ದಾರೆ.
ಸಚಿವಾಲಯದಲ್ಲಿರುವ ಪೀಠೋಪಕರಣಗಳನ್ನು ನಿರುಪಯುಕ್ತ ವಸ್ತುಗಳೆಂದು ಸುಳ್ಳು ದಾಖಲೆ ತೋರಿಸಿ ಪೀಠೋಪಕರಣಗಳನ್ನು ಪಡೆದುಕೊಂಡಿದ್ದಾರೆ. ಅಂತೆಯೇ ವೀರಣ್ಣ ಅವರ ಮಗ ಮಹೇಶ್ ಅವರು ಕಿತ್ತೂರು ಬಳಿ ಪೆಟ್ರೋಲ್ ಬಂಕ್ ಹೊಂದಿದ್ದು, ಅವರು ಅಕ್ರಮವಾಗಿ ವ್ಯವಹಾರ ಮಾಡುತ್ತಿದ್ದಾರೆ' ಎಂದು ಪ್ರಫುಲ್ ಚಂದ್ರ ಹೇಳಿದರು.
ಒಟ್ಟಾರೆ ಸತತ ಏಳು ವರ್ಷಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಪಕ್ಷದ ಎಲ್ಲ ಶಾಸಕರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಫುಲ್ ಚಂದ್ರ ಅವರ ಈ ಗಂಭೀರ ಆರೋಪಗಳು ಕಾಂಗ್ರೆಸ್ ಮುಖಂಡರಾಗಿರುವ ವೀರಣ್ಣ ಮತ್ತಿಕಟ್ಟಿ ಅವರ ರಾಜಕೀಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ವೀರಣ್ಣ ಮತ್ತಿಕಟ್ಟಿ ಅವರ ಪಾತ್ರ ಕೂಡ ಇದೆ. ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಅವರು ತಮ್ಮ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದೀಗ ತಮ್ಮ ವಿರುದ್ಧ ಪ್ರಫುಲ್ ಚಂದ್ರ ಅವರು ಮಾಡುತ್ತಿರುವ ಆರೋಪಕ್ಕೆ ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


