ನಿಯಮ ಉಲ್ಲಂಘನೆ: ಏರ್‌ಟೆಲ್‌ಗೆ 650 ಕೋಟಿ ದಂಡ?

ನವದೆಹಲಿ: ರೋಮಿಂಗ್ ಸೇವೆಗಳ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಪ್ರಮುಖ ದೂರವಾಣಿ ಸೇವಾ ಸಂಸ್ಥೆ ಏರ್‌ಟೆಲ್‌ಗೆ ದೂರಸಂಪರ್ಕ ಇಲಾಖೆ 650 ಕೋಟಿ ರು.ಗಳ ದಂಡ ವಿಧಿಸುವ ಸಾಧ್ಯತೆ ಇದೆ.
2003 ಮತ್ತು 2005ರ ನಡುವಿನ ಸಮಯದಲ್ಲಿ ಭಾರ್ತಿ ಏರ್‌ಟೆಲ್ ಸಂಸ್ಥೆ, ಪರವಾನಗಿಯಲ್ಲಿ ನಮೂದಿಸಲಾಗಿರುವ ದೂರಸಂಪರ್ಕ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಇಷ್ಟು ಮೊತ್ತದ ಭಾರಿ ದಂಡವನ್ನು ವಿಧಿಸಸಲು ಚಿಂತನೆ ನಡೆಸಿದೆ. ಈ ಸಂಬಂಧ ಏರ್‌ಟೆಲ್ ಸಂಸ್ಥೆಗೆ ಈ ಹಿಂದೆ ದೂರ ಸಂಪರ್ಕ ಇಲಾಖೆ ಶೋಕಾಸ್ ನೋಟಿಸ್ ಕೂಡ ನೀಡಿತ್ತು. ಆದರೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದೂರಸಂಪರ್ಕ ಇಲಾಖೆಗೆ ಭಾರಿ ನಷ್ಟವಾಗಿತ್ತು.
ಹೀಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಒತ್ತಾಯಗಳು ಕೇಳಿಬಂದ ಹಿನ್ನಲೆಯಲ್ಲಿ ಏರ್‌ಟೆಲ್ ಸಂಸ್ಥೆಗೆ 650 ಕೋಟಿ ರುಪಾಯಿಗಳ ಭಾರಿ ದಂಡ ವಿಧಿಸುವಸಾಧ್ಯತೆ ಇದೆ.
'ನಿಯಮ ಉಲ್ಲಂಘನೆ ಕುರಿತು ಮಾಹಿತಿ ಬಂದಾಗಿನಿಂದಲೂ ಇಲಾಖೆ ಏರ್‌ಟೆಲ್ ಸಂಸ್ಥೆಯ ವ್ಯವಹಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಕರಣದಲ್ಲಿ ಯಾವುದೇ ರೀತಿಯ ನಿಧಾನಗತಿ ಧೋರಣೆಯನ್ನು ಅನುಸರಿಸಬಾರದು. ಇದರಿಂದ ಪ್ರಕರಣ ಬೇರೆಯದೇ ತಿರುವು ಪಡೆಯುತ್ತದೆ. ಆದ್ದರಿಂದ ಪ್ರಕರಣವನ್ನು ಶೀಘ್ರ ತನಿಖೆಗೆ ವಹಿಸಬೇಕು' ಎಂದು ದೂರಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಭಾರ್ತಿ ಏರ್‌ಟೆಲ್ ಸಂಸ್ಥೆಯ ವಕ್ತಾರರು ತಮಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


