ಉಗ್ರ ಕೃತ್ಯಗಳಿಗೆ ನೇಮಕ: 13 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ನವದೆಹಲಿ: ಉಗ್ರ ಕೃತ್ಯಗಳಿಗೆ ಯುವಕರ ನೇಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿನ್ ನ್ಯಾಯಾಲಯ ಮೂವರು ಉಗ್ರರಿಗೆ ಡಬಲ್ ಜೀವಾವಧಿ ಶಿಕ್ಷೆ ವಿಧಿಸಿದ್ದು, ಉಳಿದ 10 ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ಪ್ರಮುಖ ಅಪರಾಧಿಗಳಾದ ಅಬ್ದುಲ್ ಜಬ್ಬಾರ್, ಸರ್ಫಾಜ್ ನವಾಜ್, ಸಬೀರ್ ಬಿ ಬುಹರಿಗೆ ಕೊಚ್ಚಿನ್ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಎರಡು (Double life sentence) ಜೀವಾವಧಿ ಶಿಕ್ಷೆ ವಿಧಿಸಿದೆ. ಅಂತೆಯೇ ಪ್ರಕರಣದ ಇನ್ನಿತರೆ 10 ಅಪರಾಧಿಗಳಿಗೆ ಸಾಮಾನ್ಯ ಜೀವಾವಧಿ ಶಿಕ್ಷೆ ನೀಡಲಾಗಿದೆ. ಪ್ರಕರಣದ ಮತ್ತೋರ್ವ ಪ್ರಮುಖ ಅಪರಾಧಿ ಥಡ್ಯಂತವೀಡ ನಜೀರ್ ಎಂಬಾತನಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮತ್ತೊಂದು ಪ್ರಕರಣದಲ್ಲಿ ಅಪರಾಧಿಯಾಗಿರುವ ಈತ ಈಗಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಈ ಹಿಂದೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಕೊಚ್ಚಿನ್ ಎನ್‌ಐಎ ವಿಶೇಷ ನ್ಯಾಯಾಲಯ, ಕಳೆದ ಮಂಗಳವಾರ ಎಲ್ಲ 13 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿತ್ತು. ಅಲ್ಲದೆ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಹೇಳಿತ್ತು. ಅದರಂತೆ ಇಂದು ಎಲ್ಲ 13 ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಸಿರುವ ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಾಶ್ಮೀರ ಸೇರಿದಂತೆ ದೇಶಾದ್ಯಂತ ದುಷ್ಕೃತ್ಯವೆಸಗಲು ಸಂಚು ರೂಪಿಸಿದ್ದ ಉಗ್ರಗಾಮಿ ಸಂಘಟನೆಗಳು ಇದಕ್ಕಾಗಿ ಭಾರತೀಯ ಯುವಕರನ್ನು ನೇಮಿಸಿಕೊಳ್ಳುತ್ತಿದ್ದವು. 2012ರಲ್ಲಿ ಮೊದಲ ಬಾರಿಗೆ ಕೇರಳದ ಎಡಕ್ಕಾಡ್ ಪೊಲೀಸ್ ಠಾಣಾ ಸಿಬ್ಬಂಧಿಗಳು ಪ್ರಕರಣವನ್ನು ಬೇಧಿಸಿ ಅಬ್ದುಲ್ ಜಬ್ಬಾರ್, ಸರ್ಫಾಜ್ ನವಾಜ್, ಸಬೀರ್ ಬಿ ಬುಹರಿ ಸೇರಿದಂತೆ ಪ್ರಕರಣದ ಹಲವು ಆರೋಪಿಗಳನ್ನು ಬಂಧಿಸಿದ್ದರು.
ನಂತರ ಕೇಂದ್ರ ಗೃಹ ಇಲಾಖೆ ಪ್ರಕರಣದ ತನಿಖಾ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತ್ತು. ಅಲ್ಲದೆ ಶೀಘ್ರ ವಿಚಾರಣೆಗಾಗಿ ಸರ್ಕಾರ ಕೊಚ್ಚಿನ್‌ನಲ್ಲಿಯೇ ಎನ್‌ಐಎ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿತ್ತು. ಇಂದು ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ್ದು, ಎಲ್ಲ 13 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿರುವ 13 ಅಪರಾಧಿಗಳು:-
ಕಣ್ಣೂರು ಮೂಲದ ಕೆವಿ ಅಬ್ದುಲ್ ಮತ್ತು ಸಫಾಸ್, ಉರುವಾಚಲ್ ಮೂಲದ ಎಂಹೆಚ್ ಫೈಸಲ್, ತಯ್ಯಿಲ್ ಮೂಲದ ನಸೀರ್ ಅಲಿಯಾಸ್ ಹದ್ಯಂತವೀಡ ನಸೀರ್ ಅಲಿಯಾಸ್ ಹಾಜಿ, ಚಕರಾಕ್ಕಲ್ ಮೂಲದ ಪಿ.ಮುಜೀಬ್, ವಾಯನಾಡ ಮೂಲದ ಇಬ್ರಾಹಿಂ ಮೌಲ್ವಿ ಅಲಿಯಾಸ್ ಭಾಯ್, ಕಲಮಸ್ಸೆರಿ ಮೂಲದ ಫಿರೋಜ್, ಮಲಪ್ಪುರಂ ಮೂಲದ ಮುಹಮದ್ ನುವಾಜ್ ಅಲಿಯಾಸ್ ನುವಾಜ್ ಮತ್ತು ಅಬ್ದುಲ್ ಜಬ್ಬಾರ್ ಅಲಿಯಾಸ್ ಅನೂಪ್ ಅಲಿಯಾಸ್ ಸತ್ತಾರ್, ಪೆರಂಬವೂರ್ ಮೂಲದ ಸಬೀರ್ ಪಿ ಬುಹಾರಿ, ಕೊಂಡೊಟಿ ಮೂಲದ ಸೈನುದ್ದೀನ್ ಅಲಿಯಾಸ್ ಸತ್ತಾರ್ ಭಾಯ್, ಪಲ್ಲಿಕಾರ್ ಮೂಲದ ಉಮರ್ ಫರೂಖ್ ಮತ್ತು ಸರ್ಫಾಜ್ ನುವಾಜ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


