ಕೇರಾನ್‌ನಲ್ಲಿ 4 ಉಗ್ರರ ಹತ್ಯೆ: ಮುಂದುವರೆದ ಕಾರ್ಯಾಚರಣೆ

ಶ್ರೀನಗರ: ಉಗ್ರರ ನುಸುಳಿವಿಕೆಯಿಂದ ಉದ್ರಿಕ್ತಗೊಂಡಿದ್ದ ಗಡಿ ಪ್ರದೇಶ ಕೇರಾನ್ ಸೆಕ್ಟರ್‌ನಲ್ಲಿ ನಾಲ್ಕು ಉಗ್ರರನ್ನು ಕೊಲ್ಲುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ನುಸುಳುಕೋರ ಉಗ್ರರ ವಿರುದ್ಧ ಸತತ 12 ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆ ಇಂದು ಭಾರತೀಯ ಅಲ್ಪ ಮುನ್ನಡೆ ಸಾಧಿಸಿದ್ದು, 4 ಉಗ್ರರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಾನ್ ಸೆಕ್ಟರ್‌ನ ಫತೇಹ್ ಗಲಿ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ನಾಲ್ಕು ಉಗ್ರರು ಸಾವಿಗೀಡಾಗಿದ್ದಾರೆ. ಘಟನಾ ಸ್ಥಳದಿಂದ ಕೇವಲ 25 ಕಿ.ಮೀ ಅಂತರದಲ್ಲಿ ಶಾಲಾಭಾಟಿ ಗ್ರಾಮವಿದ್ದು, ಅಲ್ಲಿಯೂ ಕೂಡ ಉಗ್ರರು ಅವಿತಿರುವ ಶಂಕೆ ಇದೆ.
ಹೀಗಾಗಿ ಅವಿತಿರುವ ಉಗ್ರರಿಗಾಗಿ ಶಾಲಾಭಾಟಿ ಗ್ರಾಮದಲ್ಲಿಯೂ ಕೂಡ ಸತತ 4 ದಿನಗಳಿಂದ ಸೈನಿಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೇರಾನ್ ಸೆಕ್ಟರ್‌ನ ಫತೇಹ್ ಗಲಿ ಪ್ರದೇಶದಲ್ಲಿ ನಾಲ್ಕು ಉಗ್ರರನ್ನು ಹತ್ಯೆಗೈದಿರುವ ಭಾರತೀಯ ಸೇನೆ ಒಟ್ಟು 6 ಎಕೆ47 ಬಂದೂಕುಗಳನ್ನು ಮತ್ತು ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಭಾರಿ ಶಸ್ತ್ರಾಸ್ತ್ರ ಹೊಂದಿರುವ ಉಗ್ರರ ಗುಂಪು ಭಾರತೀಯಗಡಿಯೊಳಗೆ ನುಸುಳಿದ್ದು, ವಿವಿಧ ಗುಂಪುಗಳಾಗಿ ಗಡಿ ಪ್ರದೇಶದ ಸಮೀಪವಿರುವ ಗ್ರಾಮಗಳಿಗೆ ನುಸುಳಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಉಗ್ರರಿಗಾಗಿ ಶಾಲಾಭಾಟಿ, ಕೇರಾನ್ ಸೆಕ್ಟರ್‌ನ ಫತೇಹ್ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದು, ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಕಳೆದ ಸೆಪ್ಟೆಂಬರ್ 24ರಂದು ಭಾರತೀಯ ಸೇನೆಯ ಕಣ್ತಪ್ಪಿಸಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಸುಮಾರು 35-40 ಉಗ್ರರು ಭಾರತೀಯ ಗಡಿ ಪ್ರವೇಶಿಸಿದ್ದರು. ಈ ವಿಷಯ ತಿಳಿದ ಗಡಿ ಭದ್ರತಾ ಪಡೆ ಕೂಡಲೇ ಕಾರ್ಯಾಚರಣೆ ಆರಂಭಿಸಿ, ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿತ್ತು. ಒಟ್ಟಾರೆ ಕಾರ್ಯಾಚರಣೆಯಿಂದ ಈ ವರೆಗು 6 ಉಗ್ರರು ಹತರಾಗಿದ್ದು, ಉಳಿದ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


