ಗಡಿಯಲ್ಲಿ ಶಾಂತಿ ನೆಲಸದ ಹೊರತು ಅಭಿವೃದ್ಧಿ ಅಸಾಧ್ಯ: ಪ್ರಣಬ್

ನವದೆಹಲಿ: ಯಾವುದೇ ದೇಶದ ಗಡಿಯಲ್ಲಿ ಶಾಂತಿ ಇಲ್ಲವೆಂದಾದರೆ ಆ ದೇಶದ ಅಭಿವೃದ್ಧಿ ಕೂಡ ಅಸಾಧ್ಯವಾಗುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಟರ್ಕಿ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ಇಸ್ತಾನ್ಬುಲ್ ನಲ್ಲಿ ನಡೆದ ಪ್ರತಿಷ್ಟಿತ ವಿಶ್ವವಿದ್ಯಾಲಯವೊಂದು ಹಮ್ಮಿಕೊಂಡಿದ್ದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 'ಯಾವುದೇ ದೇಶದ ಗಡಿ ಪ್ರದೇಶದಲ್ಲಿ ಅಶಾಂತಿ ನೆಲೆಸಿದ್ದರೆ ಆ ದೇಶದ ಅಭಿವೃದ್ಧಿ ಮತ್ತು ಸಾಮರಸ್ಯ ಅಸಾಧ್ಯ ಎಂದು ಪ್ರಣಬ್ ಹೇಳಿದರು.
ಭಾರತ ಮತ್ತು ಟರ್ಕಿ ದೇಶಗಳಲ್ಲಿನ ಪ್ರಾಕೃತಿಕ ವಾತಾವರಣದಲ್ಲಿ ಅಜಗಜಾಂತರ ವ್ಯತ್ಯಸವಿದೆ. ಅಂತೆಯೇ ಉಭಯ ದೇಶಗಳಿಗೆ ತನ್ನ ಆಂತರಿಕ ಮತ್ತು ಬಾಹ್ಯ ಭದ್ರತೆಯ ಕುರಿತು ಅರಿವಿದ್ದು, ಭಯೋತ್ಪಾದನೆ ಯಾವುದೇ ದೇಶದ ದೊಡ್ಡ ಸಮಸ್ಯೆಯಾಗಿದೆ. ತನ್ನ ಗಡಿ ದೇಶಗಳೊಂದಿಗೆ ಶಾಂತಿಯುತವಾಗಿ ಮತ್ತು ಸಾಮರಸ್ಯ ಕಾಯ್ದುಕೊಳ್ಳಲು ಭಾರತ ಬಯಸುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯ ಪ್ರಾಯೋಜಿತ ದಾಳಿಯನ್ನು ಹಿನ್ನಲೆಯಾಗಿಸಿಕೊಂಡು ಮಾತನಾಡಿದ ಪ್ರಣಬ್, ಇಂದು ಪರೋಕ್ಷವಾಗಿ ಪಾಕಿಸ್ತಾನದ ನಿಲುವನ್ನು ಟೀಕಿಸಿದರು. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉಂಟಾಗಿರುವ ಅಶಾಂತಿಗೆ ಪಾಕಿಸ್ತಾನ ಸೇನೆಯೇ ಕಾರಣ ಎಂದು ಭಾರತೀಯ ಸೇನೆ ಮೂಲಗಳು ಖಚಿತ ಪಡಿಸಿದ್ದು, ನಿನ್ನೆಯಷ್ಟೇ ಪಾಕಿಸ್ತಾನ ಭಾರತದ ಎಲ್ಲಾ ಆರೋಪಗಳನ್ನು ಸಾರಸಾಗಟಾಗಿ ತಳ್ಳಿಹಾಕಿತ್ತು. ಅಲ್ಲದೆ ಭಾರತ ಆರೋಪಗಳ ನಿರಾಧಾರ ಎಂದು ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


