ಈಗಿನ ಸುದ್ದಿ

85 ಕೋಟಿ ಮೌಲ್ಯದ 17 ಕೆಜಿ ಹೆರಾಯಿನ್ ವಶ

Published On :

ಅಮೃತಸರ್: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಗಡಿ ಭಧ್ರತಾ ಪಡೆಯ ಯೋಧರು ಭಾರಿ ಪ್ರಮಾಣ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಪಂಜಾಬ್ನ ಅಮೃತಸರ ಸಮೀಪದ ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಕಬ್ಬಿಣದ ಮುಳ್ಳುತಂತಿಗಳನ್ನು ದಾಟಿ ಬರುತ್ತಿದ್ದ ಕೆಲವರು ಅಪಾರ ಪ್ರಮಾಣದ ಮಾದಕ ವಸ್ತುವನ್ನು ಭಾರತಕ್ಕೆ ರವಾನಿಸುತ್ತಿದ್ದರು. ಇದನ್ನು ಗಮನಿಸಿದ ಗಡಿಭದ್ರತಾ ಪಡೆಯ ಯೋಧರು, ಅವರನ್ನು ಅಲ್ಲಿಯೇ ನಿಲ್ಲಲು ಸೂಚಿಸದರು. ಆದರೆ ಇದನ್ನು ಲೆಕ್ಕಿಸದ ಅವರು ತಮ್ಮ ಪಾಡಿಗೆ ತಾವು ಭಾರತದತ್ತ ನುಗ್ಗುತ್ತಿದ್ದರು.

ಕೊನೆಗೆ ಯೋಧರು ಗಾಳಿಯಲ್ಲಿ ಗುಂಡುಹಾರಿಸಿ ನಿಲ್ಲುವಂತೆ ಎಚ್ಚರಿಕೆ ನೀಡಿದಾಗ ತಾವು ತಂದಿದ್ದ ಬ್ಯಾಗನ್ನು ಅಲ್ಲಿಯೇ ಬಿಟ್ಟು ಅವರು ಪಾಕಿಸ್ತಾನದತ್ತ ಪರಾರಿಯಾದರು. ನಂತರ ಬ್ಯಾಗನ್ನು ಪರೀಕ್ಷಿಸಿದ ಯೋಧರು, ಬ್ಯಾಗನಲ್ಲಿ ಸುಮಾರು 17 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಪರಾರಿಯಾದವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಬ್ಯಾಗನಲ್ಲಿ ದೊರೆತ 17 ಕೆಜಿ ಹೆರಾಯಿನ್ ಈಗಿನ ಮಾರುಕಟ್ಟೆ ಮೌಲ್ಯ ಸುಮಾರು 85 ಕೋಟಿ ರುಪಾಯಿಗಳಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಗಡಿ ಪ್ರದೇಶದಲ್ಲಿ ಮಾದಕವಸ್ತು ರವಾನಿಸುವಿಕೆ ಜಾಸ್ತಿಯಾಗುತ್ತಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.