ಐಂದ್ರಿತಾ ರೇ ವಿರುದ್ಧ ನಿರ್ದೇಶಕರ ಸಂಘಕ್ಕೆ ದೂರು

ಬೆಂಗಳೂರು: ನಟಿ ಐಂದ್ರಿತಾ ರೇಯವರು ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿರುವ ಬರ್ಫಿ ಚಿತ್ರದ ನಿದೇಶಕ ಶೇಕರ್ ಅವರು ಸೋಮವಾರ ಐಂದ್ರಿತಾ ವಿರುದ್ಧ ಕನ್ನಡ ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದಾರೆ.
ಬರ್ಫಿ ಚಿತ್ರದ ನಾಯಕಿಯಾಗಿರುವ ಐಂದ್ರಿತಾ ಅವರು ಚಿತ್ರದ ಪ್ರೋಮೋದ ಟ್ರೈಲರ್ನಲ್ಲಿ ತನ್ನ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ, ತಮ್ಮನ್ನು ನಿಂದಿಸಿದ್ದಾರೆ ಎಂದು ಶೇಖರ್ ದೂರಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಶೇಖರ್, ಎಲ್ಲಿಯೂ ನಾವು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಯುಟ್ಯೂಬ್ನಲ್ಲಿ ಬಿಡಲಾಗಿರುವ ಪ್ರೋಮೋದಲ್ಲೂ ಸಹ ಅವರ ಹೆಸರನ್ನು ಮ್ಯೂಟ್ ಮಾಡಲಾಗಿದೆ. ಆದರೂ ಐಂದ್ರಿತಾ ಅವರು ಏಕಾಏಕಿ ನನಗೆ ಕಾಲ್ ಮಾಡಿ 'ಬಾಸ್ಟೆಡ್' ಎಂದು ನಿಂದಿಸಿದ್ದಾರೆ. ಇದರಿಂದ ತಮ್ಮ ಮನಸ್ಸಿಗೆ ನೋವಾಗಿದೆ. ಆದ್ದರಿಂದ ಐಂದ್ರಿತಾ ಅವರು ತಮ್ಮಲ್ಲಿ ಕ್ಷಮೆ ಕೇಳಬೇಕು ಎಂದು ಶೇಖರ್ ಒತ್ತಾಯಿಸಿದ್ದಾರೆ.
ಬರ್ಫಿ ಚಿತ್ರಕ್ಕೆ ಸಂಬಂಧಿಸಿದಂತೆ ಐಂದ್ರಿತಾ ರೇ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅಲ್ಲದೆ ಅವರನ್ನು ಯಾವುದೇ ರೀತಿಯಲ್ಲೂ ಕೆಟ್ಟದಾಗಿ ಬಿಂಬಿಸಿಲ್ಲ, ಹಾಗೊಂದು ಪಕ್ಷ ಅವರನ್ನು ಕೆಟ್ಟದಾಗಿ ಬಿಂಬಿಸಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲಾಕಿದ್ದಾರೆ. ನನ್ನ ಚಿತ್ರದಲ್ಲಿ ನಾಯಕಿಯನ್ನು ಉತ್ತಮವಾಗಿಯೆ ತೊರಿಸಿದ್ದೇನೆ ಹೊರತು ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿಲ್ಲ. ನಟಿ ಐಂದ್ರಿತಾ ಅವರು ಒಬ್ಬ ನಿರ್ದೇಶಕನಿಗೆ ಗೌರವ ಕೊಡದೆ ತಮ್ಮನ್ನು ಬಾಸ್ಟಡ್ ಎಂದು ನಿಂದಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇದು ಪಬ್ಲಿಸಿಟಿ ಗಿಮಿಕ್: ಐಂದ್ರಿತಾ
ಚಿತ್ರದ ಪ್ರೋಮೋದಲ್ಲಿ ಹೆಸರು ದುರ್ಬಳಕೆ ಸಂಬಂಧ ಚಿತ್ರದ ನಿರ್ದೇಶಕ ಶೇಖರ್ ಅವರನ್ನು ನಾನು ಯಾವುದೇ ರೀತಿಯಾಗಿ ನಿಂದಿಸಿಲ್ಲ. ಇದೆಲ್ಲಾ ಪಬ್ಲಿಸಿಟಿ ಗಿಮಿಕ್ಗಾಗಿ ನಿರ್ದೇಶಕರು ಈ ರೀತಿ ಆರೋಪಿಸಿದ್ದಾರೆ. ಈ ಆರೋಪದಲ್ಲಿ ಹುರುಳಿಲ್ಲ. ಹೀಗಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಬಳಿ ನಿರ್ದೇಶಕರ ಮೊಬೈಲ್ ನಂಬರ್ ಸಹ ಇಲ್ಲ. ಹೀಗಾಗಿ ನಾನು ಅವರನ್ನು ನಿಂದಿಸಿದ್ದೇನೆ ಎನ್ನುವುದು ಬರೀ ಮಿಥ್ಯ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಕಳೆದ ವಾರವಷ್ಟೆ ನಟ ದಿಗಂತ್ ಹಾಗೂ ಭಾಮಾ ಅಭಿನಯದ ಬರ್ಫಿ ಚಿತ್ರ ತೆರೆ ಕಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


